ಕಣ್ಣು-ಹೃದಯದ ಆರೋಗ್ಯಕ್ಕೆ ಈ ಹಣ್ಣು ವರದಾನ! ವಾರಕ್ಕೊಮ್ಮೆಯಾದರೂ ಮಿಸ್‌ ಮಾಡದೇ ತಿನ್ನಿ..

Savita M B
Feb 15,2025


ಕಪ್ಪು ದ್ರಾಕ್ಷಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.


ಇದು ವಿಟಮಿನ್ ಸಿ, ಎ, ಕೆ, ಬಿ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಗಳಂತಹ ಪೋಷಕಾಂಶಗಳನ್ನು ಒಳಗೊಂಡಿದೆ.


ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.


ದ್ರಾಕ್ಷಿಯಲ್ಲಿ ಹಲವು ವಿಧಗಳಿವೆ. ಅವು ವಿವಿಧ ದೇಶಗಳಲ್ಲಿ ಕಪ್ಪು, ಕೆಂಪು ಮತ್ತು ಹಸಿರು ಬಣ್ಣಗಳಲ್ಲಿ ಕಂಡುಬರುತ್ತವೆ. ಅವುಗಳ ರುಚಿಯೂ ವಿಭಿನ್ನವಾಗಿರುತ್ತದೆ.


ದ್ರಾಕ್ಷಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಅದರಲ್ಲೂ ಕಪ್ಪು ದ್ರಾಕ್ಷಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.


ಕಪ್ಪು ದ್ರಾಕ್ಷಿಗಳು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.


ಅವು ಕೀಲುಗಳನ್ನು ಆರೋಗ್ಯವಾಗಿಡುವ ಹೆಚ್ಚಿನ ಉರಿಯೂತ ನಿವಾರಕ ಗುಣಗಳನ್ನು ಹೊಂದಿವೆ.


ವಿಟಮಿನ್ ಸಿ ಸಮೃದ್ಧವಾಗಿರುವ ಕಪ್ಪು ದ್ರಾಕ್ಷಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.


ಕಣ್ಣಿನ ಆರೋಗ್ಯಕ್ಕೂ ಕಪ್ಪು ದ್ರಾಕ್ಷಿಯೇ ದಿವ್ಯಔಷಧವಾಗಿವೆ..

VIEW ALL

Read Next Story