ಮಹಿಳೆಯರ ಆರೋಗ್ಯಕ್ಕೆ ವರದಾನವಿದ್ದಂತೆ ಕರಿಮೆಣಸು
ಪ್ರತೀ ಭಾರತೀಯ ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಕರಿ ಮೆಣಸು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಅದರಲ್ಲೂ ಕರಿಮೆಣಸು ಮಹಿಳೆಯರ ಆರೋಗ್ಯಕ್ಕೆ ವರದಾನವಿದ್ದಂತೆ ಎಂದು ಹೇಳಲಾಗುತ್ತದೆ.
ಕರಿಮೆಣಸು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಕರಿಮೆಣಸಿನಲ್ಲಿರುವ ಶಕ್ತಿಯುತ ಫೈಟೊನ್ಯೂಟ್ರಿಯೆಂಟ್ ಎಂಬ ಅಂಶವು ಕೊಬ್ಬಿನ ಕೋಶಗಳನ್ನು ಒಡೆಯಲು ತುಂಬಾ ಸಹಾಯಕವಾಗಿದೆ. ಹಾಗಾಗಿ ತೂಕ ನಷ್ಟಕ್ಕಾಗಿ ಪ್ರಯತ್ನಿಸುತ್ತಿರುವ ಮಹಿಳೆಯರಿಗೆ ಇದು ದಿವ್ಯೌಷಧವಾಗಿದೆ.
ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಸ್ತನ ಕ್ಯಾನ್ಸರ್ ಸೇರಿದಂತೆ ಹಲವು ರೀತಿಯ ಕ್ಯಾನ್ಸರ್ ಗಳ ವಿರುದ್ಧ ಹೋರಾಡಲು ಕರಿಮೆಣಸು ಪ್ರಯೋಜನಕಾರಿಯಾಗಿದೆ.
ಕರಿಮೆಣಸಿನ ಬಳಕೆಯು ದೇಹದಲ್ಲಿ ಸಿರೊಟೋನಿನ್ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ, ಇದು ಉತ್ತಮ ಮನಸ್ಥಿತಿಗೆ ಕಾರಣವಾಗಿದೆ. ಹಾಗಾಗಿ ಕರಿಮೆಣಸಿನ ಬಳಕೆಯೂ ಖಿನ್ನತೆಯಿಂದ ಪರಿಹಾರ ನೀಡುತ್ತದೆ ಎಂದು ಹೇಳಲಾಗುತ್ತದೆ.
ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.