.ಒಂದೆಲಗ ಉತ್ತಮ ಗಿಡಮೂಲಿಕೆ. ಇದು ತ್ವಚೆಯ ಆರೋಗ್ಯಕ್ಕೂ ರಾಮಬಾಣ ಎನ್ನುವುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ.
ಈ ಎಲೆಯನ್ನು ಬ್ರಾಹ್ಮೀ, ಮಂಡೂಕಪರ್ಣಿ ಎಂದು ಕೂಡಾ ಕರೆಯಲಾಗುತ್ತದೆ.
ಇದು ಕಾಲಜನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಚರ್ಮದ ಶುಷ್ಕತೆ ಕಡಿಮೆಯಾಗುತ್ತದೆ.
ಇದು ಚರ್ಮವನ್ನು ಶುದ್ದೀಕರಿಸಲು ಸಹಾಯ ಮಾಡುತ್ತದೆ. ಇದು ಚರ್ಮದಿಂದ ಹಾನಿಕಾರಕ ವಿಷವನ್ನು ತೆಗೆದು ಹಾಕುತ್ತದೆ.
ಚರ್ಮದ ನೈಸರ್ಗಿಕ ತೇವಾಂಶವನ್ನು ಕಾಪಾಡುತ್ತದೆ. ಚರ್ಮದ ಉರಿಯುತ ದದ್ದುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಇದು ನಂಜು ನಿರೋಧಕ ಗುಣವನ್ನು ಹೊಂದಿದೆ. ಇದು ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಇದು ಗಾಯದಲ್ಲಿನ ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ಗಾಯ ಬೇಗನೇ ವಾಸಿಯಾಗಲು ಸಹಾಯ ಮಾಡುತ್ತದೆ.
ಚರ್ಮದಲ್ಲಿನ ಹೆಚ್ಚುವರಿ ಎಣ್ಣೆಯನ್ನು ತೆಗೆದು ಹಾಕುತ್ತದೆ. ಇದು ತ್ವಚೆಯ ರಂಧ್ರಗಳನ್ನು ಸ್ವಚ್ಛ ಗೊಳಿಸಲು ಸಹಾಯ ಮಾಡುತ್ತದೆ.