ಮೆದುಳಿನಲ್ಲಿ ಗೆಡ್ಡೆ ಬೆಳೆಯುವುದನ್ನು ಬ್ರೈನ್ ಟ್ಯೂಮರ್ ಎನ್ನಲಾಗುತ್ತದೆ. ಇದು ಮೆದುಳಿನ ಕೋಶಗಳ ಅಸಹಜ ಬೆಳವಣಿಗೆಯಿಂದ ಉಂಟಾಗುವ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ.
ಬ್ರೈನ್ ಟ್ಯೂಮರ್ ಅನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಮುಂದಾಗಬಹುದಾದ ಅಪಾಯವನ್ನು ತಪ್ಪಿಸಬಹುದು.
ಮೆದುಳಿನಲ್ಲಿ ಗೆಡ್ಡೆ ಬೆಳೆಯುತ್ತಿರುವುದನ್ನು ಆರಂಭದಲ್ಲೇ ಪತ್ತೆ ಹಚ್ಚಿದರೆ ಗಂಭೀರ ಶಸ್ತ್ರಚಿಕಿತ್ಸೆ ಇಲ್ಲದೆಯೂ ವೈದ್ಯರು ಕೆಲವು ವಿಶೇಷ ಚಿಕಿತ್ಸೆಗಾಲ ಮೂಲಕ ಮೆದುಳಿನ ಗೆಡ್ಡೆಯ ಬೆಳವಣಿಗೆಯನ್ನು ನಿಲ್ಲಿಸಬಹುದು.
ಬ್ರೈನ್ ಟ್ಯೂಮರ್ ಆರಂಭಿಕ ಲಕ್ಷಣಗಳು ಸಾಮಾನ್ಯ ತಲೆನೋವು, ಮೈಗ್ರೇನ್, ಕಣ್ಣಿನಲ್ಲಿ ಆಯಾಸ ಮತ್ತು ಒತ್ತಡದಂತಹ ಸಮಸ್ಯೆಗಳನ್ನು ಹೋಲುತ್ತದೆ.
ನಿರಂತರವಾಗಿ ನೀವು ಅಸಹನೀಯ ತಲೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ಸಾಮಾನ್ಯವಾಗಿ ಬೆಳಿಗ್ಗೆ ಏಳುವಾಗಲೇ ತಲೆನೋವು, ಬಗ್ಗಿದಾಗ ತಲೆಕಳಚಿದಂತೆ ಆಗುವುದು ಎಲ್ಲವೂ ಸಹ ಬ್ರೈನ್ ಟ್ಯೂಮರ್ ನ ಆರಂಭಿಕ ಲಕ್ಷಣಗಳು.
ಮೆದುಳಿನಲ್ಲಿ ಸಮಸ್ಯೆ ಇದ್ದಾಗ ಮೆದುಳು ಕಾರ್ಯನಿರ್ವಹಣೆಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಅಲ್ಲದೆ, ಯಾವುದೇ ವಿಚಾರದಲ್ಲೂ ಸಹ ಗಮನ ಕೇಂದ್ರೀಕರಿಸುವುದು ಕಷ್ಟವಾಗುತ್ತದೆ.
ದೃಷ್ಟಿ ಮಸುಕಾಗುವುದು, ಒಂದೇ ವಸ್ತು ಒಂದಕ್ಕಿಂತ ಹೆಚ್ಚು ಕಾಣಿಸುವುದು, ದಿಢೀರ್ ದೃಷ್ಠಿನಷ್ಟದಂತಹ ಸಮಸ್ಯೆಗಳು ಸಹ ಮೆದುಳಿನ ಗೆಡ್ಡೆಯ ಲಕ್ಷಣಗಳಾಗಿರಬಹುದು.
ಪದಗಳನ್ನು ಮರೆತುಬಿಡುವುದು, ಕೇಳುವ ಸಾಮರ್ಥ್ಯ ಕುಂಠಿತಗೊಳ್ಳುವುದು ಸೇರಿದಂತೆ ಸಂವಹನದಲ್ಲಿ ತೊಂದರೆ ಉಂಟಾಗುತ್ತಿದ್ದರೂ ಇದು ಎಚ್ಚರಿಕೆಯ ಸಂಕೇತವಾಗಿದೆ.
ಮೆದುಳಿನಲ್ಲಿ ಗೆಡ್ಡೆ ಸಮಸ್ಯೆಯ ಆರಂಭಿಕ ಲಕ್ಷಣಗಳಲ್ಲಿ ಸ್ಮರಣಶಕ್ತಿ ನಷ್ಟವೂ ಒಂದು.
ಬ್ರೈನ್ ಟ್ಯೂಮಾರ್ ಸಮಸ್ಯೆ ಇದ್ದವರಲ್ಲಿ ಅವರ ವರ್ತನೆಯಲ್ಲೂ ಎಂದರೆ ಅತಿಯಾದ ಕೋಪ, ಎಲ್ಲಾದಕ್ಕೂ ಕಿರಿಕಿರಿ ಮಾಡುವುದು, ಮಾನಸಿಕವಾಗಿ ಅಸಮತೋಲನದಂತಹ ಗಮನಾರ್ಹ ಬದಲಾವಣೆಗಳನ್ನು ಕಾಣಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.