Morning diet: ನಾವು ಬೆಳಿಗ್ಗೆ ಎದ್ದು ತಕ್ಷಣ ಹೊಟ್ಟೆ ಖಾಲಿ ಇದ್ದಾಗಲೇ ಬ್ರೆಡ್ ತಿನ್ನುತ್ತೇವೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಾ? ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿಂದರೆ ಏನು ಆಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿನ್ನೋದು ಒಳ್ಳೆಯದಾ..?
ಬ್ರೆಡ್ ಸಾಮಾನ್ಯವಾಗಿ ಮೈದಾ, ಗೋಧಿ ಹಿಟ್ಟು ಅಥವಾ ಮೆಕ್ಕೆಜೋಳ ಹಿಟ್ಟಿನಿಂದ ತಯಾರಾಗುತ್ತದೆ. ಇದರಲ್ಲಿ ಕಾರ್ಬೊಹೈಡ್ರೇಟ್ ಹೆಚ್ಚು ಇರುತ್ತದೆ.
ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿಂದರೆ ಹೊಟ್ಟೆ ತುಂಬಿದ ಅನುಭವ ಬರುತ್ತದೆ ಆದರೆ ಪೋಷಕಾಂಶ ಕಡಿಮೆ ಸಿಗುತ್ತದೆ.
ಮೈದಾದ ಬ್ರೆಡ್ ಹೊಟ್ಟೆಯಲ್ಲಿ ಆಸಿಡ್ ಹೆಚ್ಚಿಸಬಹುದು. ಇದರಿಂದ ಕೆಲವರಿಗೆ ಜೀರ್ಣಕ್ರಿಯೆ ತೊಂದರೆ ಉಂಟಾಗಬಹುದು.
ಬ್ರೆಡ್‌ನಲ್ಲಿ ಕಾರ್ಬೊಹೈಡ್ರೇಟ್ ಜಾಸ್ತಿ ಇರುವುದರಿಂದ ಸಕ್ಕರೆ ಮಟ್ಟ ತಾತ್ಕಾಲಿಕವಾಗಿ ಏರಬಹುದು.
ಖಾಲಿ ಹೊಟ್ಟೆಯಲ್ಲಿ ಬ್ರೆಡ್ ಮಾತ್ರ ತಿಂದರೆ ಪ್ರೋಟೀನ್, ವಿಟಮಿನ್, ಖನಿಜಗಳ ಕೊರತೆ ಇರುತ್ತದೆ.
ಬ್ರೆಡ್ ಜೊತೆಗೆ ಹಾಲು, ಮೊಟ್ಟೆ, ತರಕಾರಿ ಅಥವಾ ಹಣ್ಣು ತಿಂದರೆ ಸಮತೋಲನವಾಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿನ್ನೋದರಿಂದ ತಾತ್ಕಾಲಿಕ ಶಕ್ತಿ ಸಿಗುತ್ತದೆ, ಆದರೆ ದೀರ್ಘಕಾಲಕ್ಕೆ ಆರೋಗ್ಯಕರವಲ್ಲ. ಸರಿಯಾದ ಕಾಂಬಿನೇಶನ್‌ನಲ್ಲಿ ತಿನ್ನೋದು ಉತ್ತಮ.