ಬ್ರೌನ್‌ ರೈಸ್‌

Diabetes Control Tips: ಶುಗರ್ ರೋಗಿಗಳಿಗೆ ವರದಾನ ಬ್ರೌನ್ ರೈಸ್!

Chetana Devarmani
Mar 18,2024

ಬ್ರೌನ್‌ ರೈಸ್‌

ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಅನ್ನದ ಜೊತೆಗೆ ಬ್ರೌನ್ ರೈಸ್ ಸೇವನೆ ಹೆಚ್ಚಾಗಿದೆ. ಏಕೆಂದರೆ ವೈಟ್‌ ರೈಸ್‌ಗಿಂತ ಬ್ರೌನ್ ರೈಸ್ ಸೇವನೆ ಆರೋಗ್ಯಕ್ಕೆ ಉತ್ತಮ ಎನ್ನುತ್ತಿದ್ದಾರೆ ಆರೋಗ್ಯ ತಜ್ಞರು.

ಬ್ರೌನ್‌ ರೈಸ್‌

ಬ್ರೌನ್ ರೈಸ್ ತಿನ್ನುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ಬಿಳಿ ಅಕ್ಕಿಯಲ್ಲಿ ಫೈಬರ್ ಮತ್ತು ಪೋಷಕಾಂಶಗಳು ಕಡಿಮೆ. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದಿಲ್ಲ.

ಬ್ರೌನ್‌ ರೈಸ್‌

ಬ್ರೌನ್ ರೈಸ್ ನಲ್ಲಿ ಪೋಷಕಾಂಶಗಳು ಮತ್ತು ನಾರಿನಂಶ ಅಧಿಕವಾಗಿದೆ. ಆದ್ದರಿಂದ ಬ್ರೌನ್ ರೈಸ್ ತಿನ್ನುವುದರಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ.

ಬ್ರೌನ್‌ ರೈಸ್‌

ಬ್ರೌನ್ ರೈಸ್ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದರಲ್ಲಿರುವ ಫೈಬರ್ ಮಟ್ಟವು ಕರುಳಿನ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ಗುಣಪಡಿಸುವಲ್ಲಿ ಇದು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಬ್ರೌನ್‌ ರೈಸ್‌

ಬಿಳಿ ಅಕ್ಕಿ ತುಂಬಾ ವೇಗವಾಗಿ ಜೀರ್ಣವಾಗುತ್ತದೆ. ಜೀರ್ಣವಾದ ನಂತರ ನಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗುವ ಸಾಧ್ಯತೆ ಹೆಚ್ಚು.

ಬ್ರೌನ್‌ ರೈಸ್‌

ಬ್ರೌನ್ ರೈಸ್ ಅಷ್ಟು ಬೇಗ ಜೀರ್ಣವಾಗುವುದಿಲ್ಲ. ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದು ನಿಮ್ಮ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ.

ಬ್ರೌನ್‌ ರೈಸ್‌

ಬ್ರೌನ್ ರೈಸ್ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿರುವ ನಾರಿನಂಶವು ಎಲ್ಲಾ ರೀತಿಯ ಹೃದಯ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬ್ರೌನ್‌ ರೈಸ್‌

ಬ್ರೌನ್ ರೈಸ್ ಲಿಗ್ನಾನ್ ಎಂಬ ಸಂಯುಕ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ.

ಬ್ರೌನ್‌ ರೈಸ್‌

ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

VIEW ALL

Read Next Story