ಮಜ್ಜಿಗೆಯಲ್ಲಿ ಪ್ರೋಬಯೊಟಿಕ್ ಸೂಕ್ಷ್ಮಜೀವಿಗಳು ಕಂಡು ಬರುವುದರಿಂದ ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಕೂಡ ಸಮೃದ್ಧವಾಗಿದ್ದು ಇದು ಮೂಳೆಗಳ ಆರೋಗ್ಯಕ್ಕೆ ಅದರಲ್ಲೂ ಆಸ್ಟಿಯೋಪೋರೋಸಿಸ್ ನಂತಹ ಆರೋಗ್ಯ ಸಮಸ್ಯೆಗಳಿಂದ ದೇಹವನ್ನು ರಕ್ಷಿಸುತ್ತದೆ.
ಮಜ್ಜಿಗೆ ಸೇವನೆಯಿಂದ ದೇಹ ತಂಪಾಗುತ್ತದೆ. ಅಷ್ಟೇ ಅಲ್ಲ ಇದು ಹೈ ಬಿಪಿ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಲಾಭದಾಯಕವಾಗಿದೆ.
ನಿತ್ಯ ಕಡಿದ ಮಜ್ಜಿಗೆ ಕುಡಿಯುವುದರಿಂದ ಇದು ತೂಕ ನಷ್ಟಕ್ಕೂ ಸಹ ಕೊಡುಗೆ ನೀಡುತ್ತದೆ. ಆದರೆ, ಇದಕ್ಕಾಗಿ ಮಜ್ಜಿಗೆಯಲ್ಲಿ ಇದೊಂದು ಪದಾರ್ಥವನ್ನು ಬೆರೆಸಿ ಕುಡಿಯಬೇಕು.
ಶುಂಠಿ ಬ್ಯಾಕ್ಟೀರಿಯಾ, ವೈರಸ್ ಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಆಕ್ಸಿಡೇಟಿವ್ ಅಂಶವು ಒತ್ತಡ ನಿವಾರಣೆಗೆ ಪ್ರಯೋಜನಕಾರಿ ಆಗಿದೆ.
ಮಜ್ಜಿಗೆಯಲ್ಲಿ ಶುಂಠಿ ರಸವನ್ನು ಬೆರೆಸಿ ಕುಡಿಯುವುದರಿಂದ ಆರೋಗ್ಯಕರವಾಗಿ ತೂಕ ಇಳಿಸಬಹುದು.
ನಿತ್ಯ ಒಂದು ಲೋಟ ಮಜ್ಜಿಗೆಯಲ್ಲಿ ಒಂದು ಸ್ಪೂನ್ ಶುಂಠಿ ರಸ ಬೆರೆಸಿ ಕುಡಿಯುವುದರಿಂದ ಸೊಂಟದ ಸುತ್ತಲೂ ಶೇಖರಣೆಯಾಗಿರುವ ಕೊಬ್ಬು ಬೆಣ್ಣೆಯಂತೆ ಕರಗಿ ಚಪ್ಪಟೆಯಾದ ಸ್ಲಿಮ್ ಬೆಲ್ಲಿಯನ್ನು ಪಡೆಯಬಹುದು.
ಮಜ್ಜಿಗೆಯಲ್ಲಿ ಜೀರಿಗೆ ಪುಡಿ ಬೆರೆಸಿ ಕುಡಿಯುವುದರಿಂಡ್ ಇದು ಗ್ಯಾಸ್ಟ್ರಿಕ್, ಅಸಿಡಿಟಿ ಕಡಿಮೆ ಮಾಡಿ ಊದಿರುವ ಹೊಟ್ಟೆಯನ್ನು ಕಡಿಮೆ ಮಾಡುವಲ್ಲಿ ಪ್ರಯೋಜನಕಾರಿ ಆಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.