ಕೆಲವರು ತಮ್ಮ ಕಾಫಿ, ಚಹಾಕ್ಕೆ ಜೇನುತುಪ್ಪವನ್ನು ಸೇರಿಸುತ್ತಾರೆ. ಸಿಹಿಗೆ ಸಕ್ಕರೆ ಬದಲು ಜೇನು ತುಪ್ಪ ಸೇರಿಸುತ್ತಾರೆ. ಆದರೆ, ಮಧುಮೇಹ ರೋಗಿಗಳಿಗೆ ಜೇನುತುಪ್ಪವು ಸುರಕ್ಷಿತವಾಗಿದೆಯೇ ಎಂಬ ಪ್ರಶ್ನೆಯು ಅನೇಕ ಜನರ ಮನಸ್ಸಿನಲ್ಲಿ ಬರುತ್ತದೆ.
ಟೈಪ್ 2 ಡಯಾಬಿಟೀಸ್ ನಿಂದ ಬಳಲುತ್ತಿರುವವರು ಕಾರ್ಬ್ ಮತ್ತು ಸಕ್ಕರೆ ಸೇವನೆಯಿಂದ ದೂರ ಇರಬೇಕು. ಅಥವಾ ಬಹಳ ಯೋಚನೆ ಮಾಡಿ ಇದನ್ನೂ ಸೇವಿಸಬೇಕು.
ಜೇನುತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್ ಜೊತೆಗೆ ವಿಟಮಿನ್ ಸಿ, ಐರನ್, ಮೆಗ್ನಿಶಿಯಮ್, ಫೊಲೇಟ್, ಪೊಟ್ಯಾಶಿಯಂ ನಂಥಹ ವಿಟಮಿನ್ ಮತ್ತು ಮಿನರಲ್ ಗಳು ಅಡಗಿವೆ. ಇದು ಆರೋಗ್ಯಕ್ಕೆ ಅತ್ಯಂತ ಲಾಭದಾಯಕವಾಗಿದೆ.
ಜೇನುತುಪ್ಪದಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇನ್ಫ್ಳಮೆಟರಿ ಗುಣಗಳ ಕಾರಣದಿಂದಾಗಿ ಡಯಾಬಿಟೀಸ್ ನಿಂದ ಕಾಣಿಸಿಕೊಳ್ಳಬಹುದಾದ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ.
ಜೇನುತುಪ್ಪ ಬಳಸುವುದರಿಂದ ಇನ್ಸುಲಿನ್ ಮಟ್ಟ ಹೆಚ್ಚಾಗುತ್ತದೆ. ಇದು ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಜೇನುತುಪ್ಪ ಒಂದು ನೈಸರ್ಗಿಕ ಸಿಹಿಕಾರಕವಾಗಿದೆ. ಆದರೂ ಇದರಲ್ಲಿ ಕ್ಯಾಲೋರಿ, ಶುಗರ್ ಮತ್ತು ಕಾರ್ಬೋಹೈಡ್ರೆಟ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಆದರೂ ಕೂಡಾ ಜೇನು ಬ್ಲಡ್ ಶುಗರ್ ಮೇಲೆ ಕಡಿಮೆ ಪ್ರಭಾವ ಬೀರುತ್ತದೆ.
ಜೇನುತುಪ್ಪದಲ್ಲಿ ಸಕ್ಕರೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸಿಹಿ ಅಡಗಿರುತ್ತದೆ. ಹಾಗಾಗಿ ಇದನ್ನೂ ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
ಒಂದು ವೇಳೆ ನಿಮ್ಮ ಶುಗರ್ ಲೆವೆಲ್ ತುಂಬಾ ಹೆಚ್ಚಾಗಿದ್ದರೆ ಜೇನು ತುಪ್ಪ ಸೇವಿಸಬಾರದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ