Sapota: ಸಪೋಟ ಹಣ್ಣಿನಲ್ಲಿ ಹಲವರು ಆರೋಗ್ಯ ಪ್ರಯೋಜನೆಗಳಿವೆ. ಆದರೆ ಇವುಗಳನ್ನು ಮಧುಮೇಹ ಇರುವವರು ತಿನ್ನಬಹುದೇ ಅಥವಾ ಬೇಡವೇ? ಎಂಬುದನ್ನು ತಿಳಿಯಲು ಮುಂದೆ ಓದಿ...
ಸಪೋಟಾ ಹಣ್ಣನ್ನು ನೋಡಿದರೆ ಬಾಯಲ್ಲಿ ನೀರು ಬರುತ್ತದೆ. ಸಿಹಿ ತಿರುಳು ಬಾಯಿಗೆ ಹಾಕಿಕೊಂಡ ತಕ್ಷಣ ಕರಗುತ್ತದೆ. ಇದು ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿ.
ಈ ಹಣ್ಣಿನಲ್ಲಿ ಖನಿಜಗಳು, ಉತ್ಕರ್ಷಣ ನಿರೋಧಕಗಳು, ಪೋಷಕಾಂಶಗಳು ಮತ್ತು ಕಬ್ಬಿಣ, ಪೊಟ್ಯಾಸಿಯಮ್, ತಾಮ್ರ, ಕ್ಯಾಲ್ಸಿಯಂ, ಮೆಗ್ರೀಸಿಯಮ್, ಸತು ಮತ್ತು ರಂಜಕದಂತಹ ಫೈಬರ್ ಅಂಶಗಳು ಸಮೃದ್ದವಾಗಿದೆ.
ಬೇಸಿಗೆಯಲ್ಲಿ ಸೌತೆಕಾಯಿ, ಕಲ್ಲಂಗಡಿ ಮತ್ತು ಮಾವಿನ ಹಣ್ಣಿನ ಜೊತೆಗೆ, ಅನೇಕ ಜನರು ಸಪೋಟಾ ತಿನ್ನಲು ಇಷ್ಟಪಡುತ್ತಾರೆ.
ಸಪೋಟಾ ಸರಿಯಾದ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಇದು ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಸಪೋಟಾ ವಿಟಮಿನ್ ಸಿ ಅಂಶವನ್ನು ಹೊಂದಿದ್ದು, ಇದು ರೋಗನಿರೋಧಕ ವ್ಯವಸ್ಥೆಯ ಕಾರ್ಯವನ್ನು ದ್ವಿಗುಣಗೊಳಿಸುತ್ತದೆ. ಸೋಂಕು ತಡೆಗಟ್ಟಲು ಸಹಾಯ ಮಾಡುತ್ತದೆ.
ಸಪೋಟಾದಲ್ಲಿರುವ ಪೋಷಕಾಂಶಗಳು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಕಾಂತಿಯುತವಾಗಿಡಲು ಬಹಳ ಉಪಯುಕ್ತವಾಗಿವೆ.
ಸಪೋಟಾವನ್ನು ಸೂಥಿ, ಜಾಮ್, ಜೆಲ್ಲಿ, ಕೇಕ್ ಮುಂತಾದ ಹಲವು ವಿಧಗಳಲ್ಲಿ ಸೇವಿಸಬಹುದು. ಆದರೆ ಇದನ್ನು ಮಿತಿಯಾಗಿ ಸೇವಿಸುವುದು ಉತ್ತಮ.
ಏಕೆಂದರೆ ಇದರಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಆದ್ದರಿಂದ, ಅಲರ್ಜಿಗಳು, ಮಧುಮೇಹ ಮತ್ತು ಹೊಟ್ಟೆಯ ಸಮಸ್ಯೆಗಳಂತಹ ಆರೋಗ್ಯ ಸ್ಥಿತಿಗಳಿರುವ ಜನರು ಇದನ್ನು ತಿನ್ನುವುದನ್ನು ತಪ್ಪಿಸಬೇಕು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದುಗಳನ್ನು ಆಧರಿಸಿದೆ, ಇದನ್ನೂ ZEE KANNADA NEWS ಖಚಿತ ಪಡಿಸುವುದಿಲ್ಲ