ತೂಕ ಇಳಿಕೆಗೆ ಓಮಕಾಳನ್ನು ಈ ರೀತಿ ಬಳಸಿ

ತೂಕ ನಷ್ಟಕ್ಕೆ ಓಮಕಾಳು

ಅಡುಗೆಮನೆಯಲ್ಲಿ ಇರುವ ಓಮ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಓಮ ಕಾಳಿನ ನೀರು

ಓಮ ಕಾಳಿನ ನೀರು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ರಾತ್ರಿಪೂರ್ತಿ ಒಮಕಾಳನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಆ ನೀರನ್ನು ಕುಡಿಯುವುದರ ಮೂಲಕ ತೂಕ ಇಳಿಸಬಹುದು.

ಓಮ ಕಾಳು ಮತ್ತು ತುಳಸಿ

ರಾತ್ರಿಪೂರ್ತಿ ಒಮಕಾಳನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಆ ನೀರನ್ನು ಚೆನ್ನಾಗಿ ಕುದಿಸಿ. ಹೀಗೆ ಕುಡಿಸುವಾಗ 4-5 ತುಳಸಿ ಎಲೆಗಳನ್ನು ಸೇರಿಸಿ. ಹೀಗೆ ಕುದಿಸಿದ ನೀರನ್ನು ತಣ್ಣಗಾಗಿಸಿ ಕುಡಿಯಬೇಕು.

ತೂಕ ನಷ್ಟ ಗ್ಯಾರಂಟಿ

ಓಮ ಕಾಳಿನ ನೀರು ಅಥವಾ ಓಮ ಕಾಳು ಮತ್ತು ತುಳಸಿಯ ನೀರು ಇದನ್ನು ಮುಂಜಾನೆ ಖಾಲಿ ಹೊಟ್ಟೆಗೆ ತೆಗೆದುಕೊಳ್ಳಬೇಕು. 15 ರಿಂದ 20 ದಿನಗಳಲ್ಲಿ ನಿಮ್ಮ ತೂಕ ಇಳಿಕೆಯಾಗುವುದು ಖಂಡಿತಾ.

ಓಮದ ಪುಡಿ

ರಾತ್ರಿ ಓಮದ ಕಾಳು ನೆನೆಸಿಡುವುದು ಮರೆತು ಹೋದರೆ ಬೆಳ್ಳಿಗೆ ಸ್ವಲ್ಪ ಓಮದ ಕಾಳನ್ನು ಹುರಿದು ಪುಡಿ ಮಾಡಿಕೊಳ್ಳಿ. ಬಿಸಿ ನೀರಿಗೆ ಒಂದು ಚಮಚ ಓಮದ ಕಾಳಿನ ಪುಡಿಯನ್ನು ಹಾಕಿ ಕುಡಿಯಿರಿ.

ಓಮ ಕಾಳು ಮತ್ತು ಜೇನು

ರಾತ್ರಿಪೂರ್ತಿ ಒಮಕಾಳನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಅದನ್ನು ಕುದಿಸಿ ನಂತರ ಅದಕ್ಕೆ ಒಂದು ಚಮಚ ಜೇನು ಸೇರಿಸಿ ಕುಡಿಯಬೇಕು.

ಓಮ ಕಾಳು ಮತ್ತು ನಿಂಬೆ

ರಾತ್ರಿಪೂರ್ತಿ ಒಮಕಾಳನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಅದನ್ನು ಕುದಿಸಿ ನಂತರ ಅದಕ್ಕೆ ನಿಂಬೆ ರಸ ಸೇರಿಸಿ ಕುಡಿಯಬೇಕು.

ಓಮ ಕಾಳು ಮತ್ತು ಮೆಂತ್ಯೆ

ಒಂದು ಲೋಟದಲ್ಲಿ ಮೆಂತ್ಯೆ ಮತ್ತು ಓಮ ಕಾಳನ್ನು ಹಾಕಿ ನೆನೆಸಿಡಬೇಕು. ಬೆಳಿಗ್ಗೆ ಈ ನೀರನ್ನು ಕುದಿಸಿ ಕುಡಿಯಬೇಕು.


ಸೂಚನೆ :ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿನ ಸಾಮಾಜಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ

VIEW ALL

Read Next Story