ಭಾರತೀಯ ಭಕ್ಷ್ಯಗಳಲ್ಲಿ ಬಳಸುವ ಪ್ರಸಿದ್ದ ಮಸಾಲೆ ದಾಲ್ಚಿನ್ನಿ ಔಷಧೀಯ ಗುಣಗಳಲ್ಲಿಯೂ ಶ್ರೀಮಂತವಾಗಿದೆ.
ದಾಲ್ಚಿನ್ನಿಯಲ್ಲಿರುವ ಉತ್ಕರ್ಷಣ ನಿರೋಧಕ, ಉರಿಯೂತ, ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
ದಾಲ್ಚಿನ್ನಿಯಲ್ಲಿರುವ ಸಿನ್ನಮಾಲ್ಡಿಹೈಡ್ನಂತಹ ಸಂಯುಕ್ತಗಳು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿ ಆಗಿದೆ.
ದಾಲ್ಚಿನ್ನಿಯಲ್ಲಿ ಪಾಲಿಫಿನಾಲ್ನಂತಹ ಉತ್ಕರ್ಷಣ ನಿರೋಧಕಗಳಿದ್ದು ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ.
ದಾಲ್ಚಿನ್ನಿಯು ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಿ ಬ್ಲಡ್ ಶುಗರ್ ನಿಯಂತ್ರಣದಲ್ಲಿಡಲು ಪ್ರಯೋಜನಕಾರಿ ಆಗಿದೆ.
ದಾಲ್ಚಿನ್ನಿ ಬಳಕೆಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಿ ಎಚ್‌ಡಿಎಲ್ ಕೊಲೆಸ್ಟ್ರಾಲ್ ಉತ್ತೇಜಿಸಲು ಸಹಕಾರಿ ಆಗಲಿದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಅಧ್ಯಯನಗಳ ಪ್ರಕಾರ, ದಾಲ್ಚಿನ್ನಿ ಬಳಕೆಯಿಂದ ಮೆದುಳಿನ ಕಾರ್ಯ ಸುಧಾರಿಸುತ್ತದೆ. ಇದು ಅಲ್ಜೈಮರ್ ನಂತಹ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತದೆ ಎಂದು ತಿಳಿದುಬಂದಿದೆ.
ದಾಲ್ಚಿನ್ನಿ ಪೂರ್ಣತೆಯ ಭಾವನೆಯನ್ನು ಉತ್ತೇಜಿಸಿ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ತೂಕ ಇಳಿಕೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.