ಮುಖದ ಕಾಂತಿ ಹೆಚ್ಚಿಸುತ್ತೆ ಕಾಫಿ ಬೀಜ
ಕಾಫಿ ಪೌಡರ್ ಫೇಸ್ ಪ್ಯಾಕ್‌ಗಳು ಸೌಂದರ್ಯ ವೃದ್ಧಿಗೆ ಸಹಾಯಕವಾಗಿವೆ.
ಕಾಫಿ ಪೌಡರ್ ಫೇಸ್ ಪ್ಯಾಕ್ ತ್ವಚೆಯಲ್ಲಿರುವ ಕಪ್ಪು ಕಲೆಗಳನ್ನು, ಸುಕ್ಕನ್ನು ನಿವಾರಿಸುತ್ತದೆ.
ಸೂರ್ಯನ ಬೆಳಕು, ವಾಯು ಮಾಲಿನ್ಯದಿಂದ ಹಾಳಾದ ಮುಖದ ಚರ್ಮವನ್ನು ಕಾಫಿ ಪೌಡರ್ ಫೇಸ್ ಪ್ಯಾಕ್ ಬಳಸಿ ನಿವಾರಿಸಬಹದು.
ಕಾಫಿ ಪುಡಿಯಲ್ಲಿರುವ ಕೆಫೀನ್ ಚರ್ಮದ ಸುಕ್ಕನ್ನು ತೆಗೆದುಹಾಕುತ್ತದೆ. ಇದರ ಸ್ಕ್ರಬ್ ಮುಖದ ಕಾಂತಿ ಮರುಕಳಿಸುವಂತೆ ಮಾಡುತ್ತದೆ.
ಒಂದು ಬಟ್ಟಲಿನಲ್ಲಿ 1 ಚಮಚ ಕಾಫಿ ಜೊತೆ ಅದಕ್ಕೆ ಮೂರು ಚಮಚ ಅಲೋವೆರಾ ಜೆಲ್ ಸೇರಿಸಿ ಮಿಶ್ರಣ ಮಾಡಿ ಹಚ್ಚಿಕೊಳ್ಳಿ, 15 ನಿಮಿಷದ ನಂತರ ತೊರೆಯಿರಿ.
ಕಣ್ಣಿನ ಕೆಳಗೆ ಕಪ್ಪಗಿರುವ ವರ್ತುಲಗಳನ್ನು ಕಾಫಿ ನಿವಾರಿಸುತ್ತದೆ. ಅದಕ್ಕೆ, ಕಾಫಿಗೆ ನೀರು ಸೇರಿಸಿ ಪೇಸ್ಟ್ ಮಾಡಿ ಕಣ್ಣಿನ ಸುತ್ತ ಹಚ್ಚಿಕೊಳ್ಳಿ. ಇದು ಕಪ್ಪು ಕಲೆಗಳನ್ನು ಹೊಗಲಾಡಿಸುತ್ತದೆ.
ಒಂದು ಬಟ್ಟಲಿನಲ್ಲಿ ನಾಲ್ಕೈದು ಚಮಚ ಕಾಫಿ ಪುಡಿ ತೆಗೆದುಕೊಂಡು 5 ಚಮಚ ಹಾಲು ಮತ್ತು 2 ಚಮಚ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಂಚಿಕೊಂಡು 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.