ಮೂತ್ರಪಿಂಡಗಳ ಕ್ಯಾನ್ಸರ್‌ಗೆ ಕಾರಣವಾಗುವ 7 ಸಾಮಾನ್ಯ ತಪ್ಪುಗಳು

Yashaswini V
Jun 10,2024

ಕಿಡ್ನಿ ಕ್ಯಾನ್ಸರ್

ನಮಗೆ ಗೊತ್ತೋ ಗೊತ್ತಿಲ್ಲದೆಯೋ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಕ್ಯಾನ್ಸರ್ ಅಪಾಯದೊಂದಿಗೆ ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತವೆ. ಅವುಗಳೆಂದರೆ..

ತಪ್ಪಾದ ಆಹಾರ ಕ್ರಮ

ಸಮತೋಲಿತ ಆಹಾರವನ್ನು ಸೇವಿಸದಿರುವುದು ಕಿಡ್ನಿ ಕ್ಯಾನ್ಸರ್‌ಗೆ ಕಾರಣವಾಗಬಹುದು.

ತೂಕ ಹೆಚ್ಚಳ

ಅಧಿಕ ತೂಕ ಹೆಚ್ಚಳದಿಂದಾಗಿ ದೇಹವು ಕಾಯಿಲೆಗಳ ಗೂಢಾಗುತ್ತದೆ. ಇವುಗಳಲ್ಲಿ ಕಿಡ್ನಿ ಕ್ಯಾನ್ಸರ್ ಕೂಡ ಒಂದು.

ನೀರು ಕುಡಿಯದಿರುವುದು

ನಮ್ಮ ದೇಹಕ್ಕೆ ಆಹಾರ ಎಷ್ಟು ಮುಖ್ಯವೋ ಅಂತೆಯೇ ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸುವುದು ಕೂಡ ಅಗತ್ಯ. ಇಲ್ಲದಿದ್ದರೆ, ಇದು ಕಿಡ್ನಿಯನ್ನು ಹಾನಿಗೊಳಿಸಬಹುದು.

ಧೂಮಪಾನ ಮದ್ಯಪಾನ

ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದೇ ಇದೆ. ಈ ಅಭ್ಯಾಸಗಳು ಕೂಡ ಕಿಡ್ನಿಯನ್ನು ಹಾನಿಗೊಳಿಸಿ, ಕಿಡ್ನಿ ಕ್ಯಾನ್ಸರ್‌ಗೆ ಕಾರಣವಾಗಬಹುದು.

ಬಿ‌ಪಿ

ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೂ ಸಹ ಕಿಡ್ನಿ ಕ್ಯಾನ್ಸರ್‌ನ ಅಪಾಯ ಹೆಚ್ಚಾಗುತ್ತದೆ.

ಹೈ ಶುಗರ್

ಡಯಾಬಿಟಿಸ್ ಸಮಸ್ಯೆ ಇರುವವರು ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡದಿದ್ದರೆ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟ ನಿರಂತರವಾಗಿ ಹೆಚ್ಚಿದ್ದರೆ ಇದೂ ಸಹ ಮೂತ್ರಪಿಂಡಗಳನ್ನು ಹಾನಿಗೊಳಿಸಬಹುದು.

ನೋವು ನಿವಾರಕಗಳು

ತಲೆ ನೋವು, ಮಂಡಿ ನೋವು, ಮೈ-ಕೈ ನೋವು ಹೀಗೆ ಒಂದಿಲ್ಲೊಂದು ಕಾರಣಕ್ಕೆ ನೋವು ನಿವಾರಕಗಳನ್ನು ತೆಗೆದುಕೊಳ್ಳುವವರಲ್ಲೂ ಸಹ ಕಿಡ್ನಿ ಹಾನಿ ಮತ್ತು ಕಿಡ್ನಿ ಕ್ಯಾನ್ಸರ್ ಅಪಾಯ ಹೆಚ್ಚು.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story