Water drinking mistakes: ಪ್ರತಿನಿತ್ಯ ನೀರು ಕುಡಿಯುವುದು ಮನುಷ್ಯನ ದೇಹಕ್ಕೆ ಬಹಳ ಒಳ್ಳೆಯದಯ, ಆದರೆ ಇದನ್ನು ಕುಡಿಯುವಾಗ ಕೆಲವು ಮಾರ್ಗಗಳನ್ನು ಪಾಲಿಸಬೇಕಾಗುತ್ತದೆ.
ನಿಂತುಕೊಂಡೇ ನೀರು ಕುಡಿಯುವುದರಿಂದ ಹೊಟ್ಟೆಗೆ ಒತ್ತಡ ಹೆಚ್ಚಾಗಿ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುತ್ತದೆ, ಆದ್ದರಿಂದ ಕುಳಿತು ನಿಧಾನವಾಗಿ ಕುಡಿಯುವುದು ಉತ್ತಮ.
ತುಂಬಾ ತಣ್ಣೀರನ್ನು ಒಮ್ಮೇಲೆ ಕುಡಿಯುವುದರಿಂದ ಗಂಟಲು ಮತ್ತು ಹೊಟ್ಟೆಗೆ ಶಾಕ್ ಕೊಡಬಹುದು, ಆದ್ದರಿಂದ ಕೊಂಚ ಉಷ್ಣ ಅಥವಾ ಸಾಮಾನ್ಯ ತಾಪಮಾನದ ನೀರು ಕುಡಿಯಿರಿ.
ಊಟ ಮುಗಿದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ, ಆದ್ದರಿಂದ ಕನಿಷ್ಠ 30 ನಿಮಿಷದ ಬಳಿಕ ನೀರು ಕುಡಿಯಬೇಕು.
ಒಮ್ಮೇಲೆ ಹೆಚ್ಚು ನೀರು ಕುಡಿಯುವುದರಿಂದ ದೇಹ ಸರಿಯಾಗಿ ಹೀರಿಕೊಳ್ಳುವುದಿಲ್ಲ, ಆದ್ದರಿಂದ ಸ್ವಲ್ಪ ಸ್ವಲ್ಪವಾಗಿ ದಿನಪೂರ್ತಿ ಕುಡಿಯುವುದು ಒಳ್ಳೆಯದು.
ಬೆಳಿಗ್ಗೆ ಎದ್ದು ತಕ್ಷಣ ಒಂದು ಗ್ಲಾಸ್ ನೀರು ಕುಡಿಯುವುದರಿಂದ ದೇಹದಲ್ಲಿನ ವಿಷಕಾರಿ ಪದಾರ್ಥಗಳು ಹೊರಹೋಗುತ್ತವೆ ಮತ್ತು ದೇಹ ಚುರುಕಾಗುತ್ತದೆ.
ಪ್ಲಾಸ್ಟಿಕ್ ಬಾಟಲ್‌ನಲ್ಲಿನ ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ಹಾನಿಕಾರಕ ರಾಸಾಯನಿಕಗಳು ದೇಹಕ್ಕೆ ಸೇರುತ್ತವೆ, ಆದ್ದರಿಂದ ಸ್ಟೀಲ್ ಅಥವಾ ಗ್ಲಾಸ್ ಬಾಟಲ್ ಬಳಸುವುದು ಸುರಕ್ಷಿತ.
ಬೆಳಿಗ್ಗೆ ಎದ್ದು ತಕ್ಷಣ ತುಂಬಾ ನೀರು ಕುಡಿಯುವುದರಿಂದ ಹೊಟ್ಟೆ ಉಬ್ಬುವುದು ಹಾಗೂ ಅಜೀರ್ಣ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಒಂದು ಗ್ಲಾಸ್‌ನಿಂದ ಪ್ರಾರಂಭಿಸಿ, ಸ್ವಲ್ಪ ಸ್ವಲ್ಪವಾಗಿ ಕುಡಿಯುವುದು ಉತ್ತಮ.