ಹಸಿರು ಎಲೆ ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಅದರಲ್ಲಿಯೂ ಪಾಲಕ್ ವಿಟಮಿನ್ ಮತ್ತು ಐರನ್ ನ ಆಗರವಾಗಿದೆ.
ಪಾಲಕ್ ಅನ್ನು ಸ್ವಲ್ಪ ಬೇಯಿಸಿ ಸಲಾಡ್ ರೂಪದಲ್ಲಿ ಸೇವಿಸಬಹುದು.
ಪೋಷಕಾಂಶಗಳ ಆಗರವಾಗಿರುವ ಪಾಲಕ್ ಅನ್ನು ಸೂಪ್ ಮಾಡಿಯೂ ಸೇವಿಸಬಹುದು. ಇದು ಜೀರ್ಣಕ್ರಿಯೆಗೆ ಸಹಕಾರಿ.
ಕಿಚಡಿ ಇಷ್ಟಪಡುವವರು ಪಾಲಕ್ ಜೊತೆಗೆ ಅನೇಕ ತರಕಾರಿಗಳನ್ನು ಹಾಕಿ ಕಿಚಡಿ ಮಾಡಿ ಸೇವಿಸಬಹುದು.
ಪಾಲಕ್ ಹಾಕಿ ಮೊಸರು ಬಜ್ಜಿ ಕೂಡಾ ಮಾಡಬಹುದು. ಇದಕ್ಕಾಗಿ ಪಾಲಕ್ ಅನ್ನು ಬೇಯಿಸಿ ನಂತರ ರುಬ್ಬಬೇಕು.
ಪಾಲಕ್ ಸ್ಮುಥಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದಕ್ಕಾಗಿ ಪಾಲಕ್ ಜೊತೆಗೆ ಕಿತ್ತಳೆ, ಅನಾನಾಸ್ ಅಥವಾ ಕೆಲವು ತರಕಾರಿಗಳನ್ನು ಸೇರಿಸಬಹುದು.
ಪಾಲಕ್ ದೇಹದ ಆರೋಗ್ಯ ಹೆಚ್ಚಿಸುತ್ತದೆ. ಈ ಮೂಲಕ ರೋಗಗಳು ಹೆಚ್ಚಾಗಿ ನಿಮ್ಮನ್ನು ಬಾಧಿಸುವುದಿಲ್ಲ.
ದೇಹದಲ್ಲಿ ರಕ್ತದ ಕೊರತೆ ಇದ್ದರೆ ಪಾಲಕ್ ಅನ್ನು ಬೇರೆ ಬೇರೆ ವಿಧಾನಗಳಲ್ಲಿ ಸೇವಿಸಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞ ಅಥವಾ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.