ಅನ್ನ ತಿಂದರೆ ದೇಹ ತೂಕ ಹೆಚ್ಚಾಗುತ್ತದೆ ಎನ್ನುವ ಮಾತಿದೆ. ಆದರೆ ಇದು ಎಷ್ಟು ಸರಿ ಎನ್ನುವ ಮಾಹಿತಿ ಇಲ್ಲಿದೆ.
ಅನ್ನ ತಿಂದರೆ ದೇಹ ತೂಕ ಹೆಚ್ಚಾಗುತ್ತದೆ ನ್ನುವ ಭಾವನೆ ನಮ್ಮಲ್ಲಿ ಬಹುತೆಕರಿಗಿದೆ. ಆದರೆ ತಜ್ಞರು ಹೇಳುವ ಪ್ರಕಾರ ಇದು ಶುದ್ದ ಸುಳ್ಳು.
ಅನ್ನದಲ್ಲಿರುವ ಕಾರ್ಬೋಹೈಡ್ರೆಟ್ ಆರೋಗ್ಯಕರವಾಗಿರುತ್ತದೆ. ಇದರಲ್ಲಿರುವ ವಿಟಮಿನ್ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ದೇಹ ತೂಕ ಇಳಿಸಬೇಕಾದರೆ ಅನ್ನವನ್ನು ಸ್ಟೀಮ್ ಮಾಡಿ ತಿನ್ನಬೇಕಂತೆ. ಹೀಗೆ ಮಾಡಿದರೆ ದೇಹ ತೂಕ ಹೆಚ್ಚಾಗುವುದಿಲ್ಲ ಎನ್ನಲಾಗುತ್ತದೆ.
ಅನ್ನವನ್ನು ಸರಿಯಾದ ಸಮಯದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
ಕಿಚಡಿಯ ರೂಪದಲ್ಲಿ ಅನ್ನವನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಬಹುದು. ಕಿಚಡಿಯಲ್ಲಿ ಅನ್ನದ ಜೊತೆಗೆ ಬೇಳೆ ಮತ್ತು ತರಕಾರಿಗಳು ಕೂಡಾ ಇರುತ್ತವೆ.
ಅನ್ನಕ್ಕೆ ತುಪ್ಪ, ಎಣ್ಣೆ ಸೇರಿಸಿ ತಿನ್ನಬಾರದು, ಹೀಗೆ ಅನ್ನವನ್ನು ಸೇವಿಸಿದರೆ ತೂಕ ಬಹಳ ಬೇಗನೆ ಹೆಚ್ಚಾಗುತ್ತದೆ.
ತೂಕ ಕಡಿಮೆ ಮಾಡಬೇಕಾದರೆ ಅನ್ನವನ್ನು ನಿಗದಿತ ಪ್ರಮಾಣದಲ್ಲಿ ಸೇವಿಸಬೇಕು. ಅಲ್ಲದೆ ಅನ್ನದ ಜೊತೆಗೆ ತರಕಾರಿಗಳನ್ನು ಕೂಡಾ ಸೇವಿಸುವುದು ಬಹಳ ಮುಖ್ಯವಾಗಿರುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.