ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಬೀಜದ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಕೊತ್ತಂಬರಿ ನೀರಿನಲ್ಲಿ ಸಾಕಷ್ಟು ಪ್ರಮಾಣದ ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಜೊತೆಗೆ ವಿಟಮಿನ್ ಸಿ ಇದ್ದು ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಹಾಗಿದ್ದರೆ ನಿತ್ಯ ಖಾಲಿ ಹೊಟ್ಟೆಯಲ್ಲಿ ಇದರ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ ಎಂದು ತಿಳಿಯೋಣ...
ಮಧುಮೇಹಿಗಳು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಬೀಜದ ನೀರು ಕುಡಿಯುವುದರಿಂದ ಮಧುಮೇಹದಿಂದ ಮುಕ್ತಿ ಪಡೆಯಬಹುದು.
ತೂಕವನ್ನು ಕಡಿಮೆ ಮಾಡಲು ಬಯಸಿದರೆ, ಕೊತ್ತಂಬರಿ ಬೀಜಗಳನ್ನು ಬಳಸುವುದು ಪ್ರಯೋಜನಕಾರಿಯಾಗಿದೆ.
ಕೊತ್ತಂಬರಿ ನೀರು ಸೇವನೆಯಿಂದ ಉದರ ಸಮಸ್ಯೆಗಳನ್ನು ದೂರ ಮಾಡಬಹುದು. ಇದು ಜೀರ್ಣಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.
ನಿಮಗೆ ಮೂಗಿನ ಹೊಳ್ಳೆಗಳಲ್ಲಿ ರಕ್ತಸ್ರಾವ ಸಮಸ್ಯೆ ಇದ್ದರೆ ಇದಕ್ಕೂ ಕೂಡ ಕೊತ್ತಂಬರಿ ನೀರು ಪ್ರಯೋಜನಕಾರಿ ಆಗಿದೆ.
ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಬೀಜದ ನೀರನ್ನು ಕುಡಿಯುವುದರಿಂದ ಪಿರಿಯಡ್ಸ್‌ಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಕೊತ್ತಂಬರಿ ಬೀಜದ ನೀರು ಸೇವನೆಯಿಂದ ಇದು ಅತ್ಯುತ್ತಮ ಲಿವರ್ ಕ್ಲೆನ್ಸಿಂಗ್ ಆಗಿ ಕಾರ್ಯ ನಿರ್ವಹಿಸುತ್ತದೆ.
ಕೊತ್ತಂಬರಿ ನೀರು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಕೊತ್ತಂಬರಿ ಬೀಜದ ನೀರನ್ನು ಕುಡಿಯುವುದರಿಂದ ಥೈರಾಯ್ಡ್ ಸಮಸ್ಯೆ ಇರುವವರಿಗೆ ಪ್ರಯೋಜನಕಾರಿ.
ಕೊತ್ತಂಬರಿ ನೀರನ್ನು ಚರ್ಮದ ಹಲವು ಸಮಸ್ಯೆಗಳಿಗೆ ರಾಮಬಾಣ ಎಂದು ಪರಿಗಣಿಸಲಾಗಿದೆ.
ಕೊತ್ತಂಬರಿ ನೀರನ್ನು ಕುಡಿಯುವುದು ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.