ಮೆಂತ್ಯ ಸೊಪ್ಪಿನಲ್ಲಿ ಪೊಟ್ಯಾಸಿಯಮ್, ಕಬ್ಬಿಣ, ವಿಟಮಿನ್ ಕೆ, ಸೋಡಿಯಂ, ಡಯೆಟರಿ ಫೈಬರ್, ಕ್ಯಾಲ್ಸಿಯಂ, ರಂಜಕದಂತಹ ಅನೇಕ ಪೋಷಕಾಂಶಗಳಿವೆ.
ಮೆಂತ್ಯ ಸೊಪ್ಪು ತಿನ್ನಲು ರುಚಿಕರ ಮಾತ್ರವಲ್ಲ, ಅದು ಆರೋಗ್ಯಕ್ಕೂ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ.
ಮೆಂತ್ಯ ಸೊಪ್ಪಿನಲ್ಲಿರುವ ಫೈಬರ್, ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಮೆಂತ್ಯ ಸೊಪ್ಪಿನ ಎಲೆಗಳನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಅದನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ನಿತ್ಯ ಸೇವಿಸುವುದರಿಂದ ಶುಗರ್ ಕಂಟ್ರೋಲ್ ನಲ್ಲಿರುತ್ತದೆ.
ಮೆಂತ್ಯ ಸೊಪ್ಪು ತೂಕ ನಷ್ಟಕ್ಕೂ ಕೂಡ ಪ್ರಯೋಜನಕಾರಿ ಆಗಿದೆ.
ಮೆಂತ್ಯ ಸೊಪ್ಪು ಕೊಲೆಸ್ಟ್ರಾಲ್ ಅನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ ಮತ್ತು ಯಕೃತ್ತಿನಲ್ಲಿ ಕೊಲೆಸ್ಟ್ರಾಲ್ ರಚನೆಯನ್ನು ತಡೆಯುತ್ತದೆ.
ಮೆಂತ್ಯ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು ಇದು ರಕ್ತ ಹೀನತೆ ಸಮಸ್ಯೆಯನ್ನು ನಿವಾರಿಸಬಲ್ಲದು.
ಮೆಂತ್ಯ ಸೊಪ್ಪಿನಲ್ಲಿ ಫೈಟೊನ್ಯೂಟ್ರಿಯೆಂಟ್‌ಗಳು ಸಮೃದ್ಧವಾಗಿದೇ. ಇದು ಮೂಳೆಗಳನ್ನು ಬಲಪಡಿಸುತ್ತದೆ.