ಕಾರ್ಬೋಹೈಡ್ರೇಟ್

ಹಲಸಿನ ಹಣ್ಣಿನಲ್ಲಿ ವಿಟಮಿನ್‌, ಖನಿಜಾಂಶಗಳು, ಕಾರ್ಬೋಹೈಡ್ರೇಟ್ ಅಂಶಗಳು, ಎಲೆಕ್ಟ್ರೋಲೈಟ್ ಅಂಶಗಳು, ಪೊಟ್ಯಾಸಿಯಮ್ ಹಾಗೂ ನಾರಿನಾಂಶಗಳು ಸಮೃದ್ಧವಾಗಿವೆ.

Puttaraj K Alur
Apr 06,2025

ಅಧಿಕ ರಕ್ತದೊತ್ತಡ ಸಮಸ್ಯೆ

ನಿಯಮಿತವಾಗಿ ಹಲಸಿನ ಹಣ್ಣು ಸೇವಿಸಿದರೆ ಅಧಿಕ ರಕ್ತದೊತ್ತಡ ಸಮಸ್ಯೆಯನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಹೃದಯದ ಆರೋಗ್ಯ

ಹಲಸಿನ ಹಣ್ಣು ಸೇನೆಯಿಂದ ಹೃದಯಕ್ಕೆ ಸಂಬಂಧಪಟ್ಟ ಹಲವಾರು ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ.

ಜೀರ್ಣಾಂಗ ವ್ಯವಸ್ಥೆ

ಹಲಸಿನ ಹಣ್ಣಿನಲ್ಲಿ ನಾರಿನಾಂಶವು ಯಥೇಚ್ಛವಾಗಿ ಕಂಡುಬರುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮಲಬದ್ಧತೆ ಸಮಸ್ಯೆ

ಹಲಸಿನ ಹಣ್ಣನ್ನು ಸೇವಿಸುವುದರಿಂದ ಜೀರ್ಣ ಪ್ರಕ್ರಿಯೆಗಳು ಸರಿಯಾಗಿ ನಡೆದು ಅಜೀರ್ಣತೆ, ಮಲಬದ್ಧತೆ ಸಮಸ್ಯೆಗಳು ದೂರವಾಗುತ್ತವೆ.

ಆಂಟಿ-ಆಕ್ಸಿಡೆಂಟ್

ಹಲಸಿನ ಹಣ್ಣಿನಲ್ಲಿ ಆಂಟಿ-ಆಕ್ಸಿಡೆಂಟ್ ಹಾಗೂ ಫ್ಲೇವನಾಯ್ಡ್ ಅಂಶಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.

ಕ್ಯಾನ್ಸರ್

ಆಂಟಿ-ಆಕ್ಸಿಡೆಂಟ್ ಅಂಶಗಳು ದೇಹದಲ್ಲಿರುವ ಕಂಡುಬರುವ ಫ್ರೀರಾಡಿಕಲ್‌ಗಳ ವಿರುದ್ಧ ರಕ್ಷಣಾತ್ಮಕವಾಗಿ ಕೆಲಸ ಮಾಡುತ್ತವೆ. ಇದರಿಂದ ಕ್ಯಾನ್ಸರ್ ಕಣಗಳು ನಮ್ಮ ದೇಹದಲ್ಲಿ ಉತ್ಪತ್ತಿ ಆಗುವುದನ್ನು ತಡೆಯಲು ನೆರವಾಗುತ್ತದೆ.

ರಕ್ತಹೀನತೆ

ನಿಯಮಿತವಾಗಿ ಹಲಸಿನ ಹಣ್ಣು ಸೇವನೆಯಿಂದ ರಕ್ತಹೀನತೆಯ ಸಮಸ್ಯೆಯು ದೂರವಾಗುತ್ತದೆ.

VIEW ALL

Read Next Story