ಬಿರು ಬೇಸಿಗೆಯಲ್ಲಿ ನಿಮ್ಮನ್ನು ಪುನರ್ಯೌವನಗೊಳಿಸಬಲ್ಲ ಮ್ಯಾಜಿಕಲ್ ಕ್ಲೆನ್ಸಿಂಗ್ ಡಿಟಾಕ್ಸ್

Yashaswini V
Apr 30,2024

ಗ್ರೀನ್ ಟೀ

ಗ್ರೀನ್ ಟೀಯಲ್ಲಿ ಉತ್ಕರ್ಷಣ ನಿರೋಧಕ ಹೇರಳವಾಗಿದ್ದು ನಿತ್ಯ ಇದನ್ನು ಸೇವಿಸುವುದರಿಂದ ಇದು ನಿಮ್ಮನ್ನು ನೈಸರ್ಗಿಕವಾಗಿ ಪುನರ್ಯೌವನಗೊಳಿಸುವಲ್ಲಿ ಪ್ರಯೋಜನಕಾರಿ ಆಗಿದೆ.

ಎಳನೀರು

ವಿದ್ಯುದ್ವಿಚ್ಛೇದ್ಯಗಳ ನೈಸರ್ಗಿಕ ಮೂಲವಾಗಿರುವ ಎಳನೀರು ದೇಹದಿಂದ ವಿಷಕಾರಿ ಅಂಶವನ್ನು ಹೊರಹಾಕುವಲ್ಲಿ ತುಂಬಾ ಪ್ರಯೋಜನಕಾರಿ ಆಗಿದೆ. ಇದು ದೇಹವನ್ನು ವಾತಾ, ಪಿತ್ತ, ಕಫದಿಂದ ರಕ್ಷಿಸುತ್ತದೆ.

ನಿಂಬೆ ಜ್ಯೂಸ್

ವಿಟಮಿನ್ ಸಿ ಸಮೃದ್ಧ, ಜಲಸಂಚಯನವನ್ನು ಬೆಂಬಲಿಸುವ ನಿಂಬೆ ಜ್ಯೂಸ್ ಅತ್ಯುತ್ತಮ ಡಿಟಾಕ್ಸ್ ಪಾನೀಯಗಳಲ್ಲಿ ಒಂದು.

ಶುಂಠಿ ಲೆಮನ್ ಟೀ

ರೋಗನಿರೋಧಕ-ಉತ್ತೇಜಿಸುವ ಗುಣಲಕ್ಷಣಗಳೊಂದಿಗೆ ಸಂಯೋಜನೆಗೊಂಡಿರುವ ಶುಂಠಿ ಲೆಮನ್ ಟೀ ದೇಹವನ್ನು ಪುನರ್ಯೌವನಗೊಳಿಸಬಲ್ಲ ಅತ್ಯುತ್ತಮ ಪಾನೀಯವಾಗಿದೆ.

ಆಪಲ್ ಸೈಡರ್ ವಿನೆಗರ್

ಒಂದು ಲೋಟ ನೀರಿನಲ್ಲಿ ಒಂದೆರಡು ಚಮಚ ಆಪಲ್ ಸೈಡರ್ ವಿನೆಗರ್ ಬೆರೆಸಿ ಕುಡಿಯುವುದರಿಂದ ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸಿ, ದೇಹವನ್ನು ನಿರ್ವಿಷಗೊಳಿಸಲು ಪ್ರಯೋಜನಕಾರಿ ಆಗಿದೆ.

ತರಕಾರಿ/ಹಣ್ಣುಗಳ ಜ್ಯೂಸ್

ಋತುಮಾನದ ಹಣ್ಣು ಅಥವಾ ತರಕಾರಿಗಳಿಂದ ತಯಾರಿಸಿ ಸೇವಿಸುವ ಪಾನೀಯಗಳು ಕೂಡ ಉತ್ತಮ ಡಿಟಾಕ್ಸ್ ಪಾನೀಯಗಳಾಗಿದ್ದು ಇವು, ನಿಮ್ಮ ದೇಹವನ್ನು ಪುನರ್ಯೌವನಗೊಳಿಸಬಲ್ಲ ಶಕ್ತಿಯನ್ನು ಹೊಂದಿದೆ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story