ಕೊರೊನಾ ಬಳಿಕ ಹೃದಯಾಘಾತದ ಸುದ್ದಿ ಹೆಚ್ಚಾಗಿ ಕೇಳಿ ಬರುತ್ತಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.
ಚಿಕ್ಕ ಚಿಕ್ಕ ಯುವಕರು ಮತ್ತು ಫಿಟ್ ಆಗಿರುವವರು ಸಹ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ.
ಕೊರೊನಾ ಬಳಿಕ ಈ ರೀತಿ ಹೃದಯಾಘಾತವಾಗುತ್ತಿರುವುದಕ್ಕೆ ಕೊರೊನಾ ಲಸಿಕೆಯೇ ಕಾರಣವಾಗಿರಬಹುದೆಂಬ ಸಂಶಯ ಮೂಡಿದೆ.
ಈ ಬಗ್ಗೆ ICMR (Indian Council of Medical Research) ಸಂಪೂರ್ಣ ಅಧ್ಯಯನ ಮಾಡಿ ವರದಿ ನೀಡಿದೆ.
ಕೋವಿಡ್ 19 ಲಸಿಕೆಯಿಂದ ಹೃದಯಾಘಾತ ಹೆಚ್ಚಾಗಿಲ್ಲ, ಜೀವನಶೈಲಿ ಹಾಗೂ ಆರೋಗ್ಯ ಸಮಸ್ಯೆಯಿಂದ ಈ ರೀತಿಯಾಗುತ್ತಿದೆ ಎಂದು ಹೇಳಿದೆ.
ICMR ಸಂಶೋಧನಾ ವರದಿಯ ಪ್ರಕಾರ, ಹೃದಯಾಘಾತಕ್ಕೆ ಪ್ರಮುಖ ಕಾರಣವೆಂದರೆ ದೈಹಿಕ ವ್ಯಾಯಾಮ ಇಲ್ಲದಿರುವುದು.
ಅತಿಯಾದ ಫಾಸ್ಟ್ ಫುಡ್ ಸೇವನೆ, ಅನಾರೋಗ್ಯಕರ ಆಹಾರ ಸೇವನೆ ಮತ್ತು ಅತಿಯಾದ ಕೊಬ್ಬಿನಂಶದ ಆಹಾರ ಸೇವನೆ ಹೃದಯಾಘಾತಕ್ಕೆ ಕಾರಣ.
ಅತಿಯಾದ ಧೂಮಪಾನ ಮತ್ತು ಮದ್ಯಪಾನ ಕೂಡ ಹೃದಯಘಾತಕ್ಕೆ ಪ್ರಮುಖ ಕಾರಣವೆಂದು ICMR ವರದಿ ಹೇಳಿದೆ.