ಹೊಸ ರೂಪಾಂತರಿ JN.1

ಕೋವಿಡ್-19ನ ಹೊಸ ರೂಪಾಂತರಿ JN.1 ದೇಶದಲ್ಲಿ ಆಂತಕ ಸೃಷ್ಟಿಸಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ.

1,970 ಸಕ್ರಿಯ ಪ್ರಕರಣ

ಸದ್ಯ ದೇಶದಲ್ಲಿ 1,970 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದ್ದು, ಕೇರಳದಲ್ಲಿ 1 ಸಾವು ಕೂಡ ಸಂಭವಿಸಿದೆ.

ಸೌಮ್ಯ ಮತ್ತು ಮಧ್ಯಮ ಹಂತ

ಕೋವಿಡ್ ಹೊಸ ರೂಪಾಂತರಿ ಲಕ್ಷಣಗಳು ಸೌಮ್ಯ ಮತ್ತು ಮಧ್ಯಮ ಹಂತದಲ್ಲಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಗಂಟಲು ನೋವು ಮತ್ತು ತಲೆನೋವು

ಜ್ವರ, ನೆಗಡಿ, ಗಂಟಲು ನೋವು ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.

ಉಸಿರಾಟದಲ್ಲಿ ಸಮಸ್ಯೆ

ಹೆಚ್ಚಿನ ರೋಗಿಗಳು ಉಸಿರಾಟದಲ್ಲಿ ಸಣ್ಣ ಪ್ರಮಾಣದ ಸಮಸ್ಯೆ ಅನುಭವಿಸಬಹುದು, ಅದು 4-5 ದಿನಗಳಲ್ಲಿ ಸುಧಾರಿಸುತ್ತದೆ.

ಹಸಿವು ಮತ್ತು ವಾಕರಿಕೆ

ಹೊಸ ರೂಪಾಂತರಿ ವೈರಸ್ ಇದ್ದರೆ ಹಸಿವು ಆಗದಿರುವುದು ಮತ್ತು ವಾಕರಿಕೆಯ ಲಕ್ಷಣಗಳಿರುತ್ತವೆ.

ಗ್ಯಾಸ್ಟ್ರಿಕ್ ಮತ್ತು ಅಜೀರ್ಣ

ಅತಿಯಾದ ಸುಸ್ತು & ಸ್ನಾಯುಗಳಲ್ಲಿ ಬಳಲಿಕೆ ಕಾಣಿಸಿಕೊಳ್ಳಬಹುದು. ಕೆಲವರಲ್ಲಿ ಗ್ಯಾಸ್ಟ್ರಿಕ್ ಮತ್ತು ಅಜೀರ್ಣದ ಸಮಸ್ಯೆ ಉಂಟಾಗಬಹುದು.

ಮನೆಯಲ್ಲಿಯೇ ಐಸೋಲೇಟ್

ಸದ್ಯ ಭಾರತದಲ್ಲಿ ಶೇ.90ರಷ್ಟು ಕೋವಿಡ್ ಪ್ರಕರಣಗಳು ನಿಯಂತ್ರಣದ ಹಂತದಲ್ಲಿದೆ. ಹೀಗಾಗಿ ಲಕ್ಷಣ ಕಂಡುಬಂದರೆ ಮನೆಯಲ್ಲಿಯೇ ಐಸೋಲೇಟ್ ಆದರೆ ಸೋಂಕು ಹರಡದಂತೆ ತಡೆಗಟ್ಟಬಹುದು.

VIEW ALL

Read Next Story