ಆರೋಗ್ಯಕರ ಆಹಾರ ಮತ್ತು ವ್ಯಾಯಾಮವು ತೂಕ ಇಳಿಸಿಕೊಳ್ಳಲು ಉತ್ತಮ ಮಾರ್ಗ. ಅದರಲ್ಲೂ ತೂಕ ನಷ್ಟಕ್ಕೆ, ಹಣ್ಣು, ತರಕಾರಿ ಮತ್ತು ಆರೋಗ್ಯಕರ ಪಾನೀಯಗಳನ್ನು ಸೇವಿಸಿದರೆ ಬೆಸ್ಟ್ ರಿಸಲ್ಟ್ ಗೋಚರವಾಗುತ್ತದೆ.
ಅದರಲ್ಲೂ ಸೌತೆಕಾಯಿ ತೂಕ ಇಳಿಕೆಗೆ ಬೆಸ್ಟ್ ಮದ್ದು, ಇದರ ಜ್ಯೂಸ್ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ತೂಕ ನಿಯಂತ್ರಣ ಮಾಡಲು ಇದರಷ್ಟು ಬೆಸ್ಟ್ ಮತ್ತೊಂದಿಲ್ಲ ಎಂದು ಹೇಳಲಾಗುತ್ತದೆ.
ಸೌತೆಕಾಯಿಗಳು ವಿಟಮಿನ್ ಸಿ ಮತ್ತು ಕೆ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತು, ಫ್ಲೇವನಾಯ್ಡ್ಗಳು, ಉತ್ಕರ್ಷಣ ನಿರೋಧಕಗಳು ಮತ್ತು ರಂಜಕದಂತಹ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.
ಡಯೆಟ್ ಫುಡ್’ನಲ್ಲಿ ಸೌತೆಕಾಯಿಯನ್ನು ಸೇರಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯೂ ಬಲಗೊಳ್ಳುತ್ತದೆ. ಜೊತೆಗೆ ಮಲಬದ್ಧತೆಯಂತಹ ಸಮಸ್ಯೆಗಳು ಸಹ ದೂರವಾಗುತ್ತೆ.
ಸೌತೆಕಾಯಿ ಜೀರ್ಣಾಂಗ ವ್ಯವಸ್ಥೆ ಮತ್ತು ಪಿತ್ತಜನಕಾಂಗವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ದೇಹವನ್ನು ನಿರ್ವಿಷಗೊಳಿಸುತ್ತದೆ.
ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸಲು ಸಹ ಸೌತೆಕಾಯಿ ಪ್ರಯೋಜನಕಾರಿ. ಅಧ್ಯಯನದ ಪ್ರಕಾರ, ಸೌತೆಕಾಯಿ ಜ್ಯೂಸ್ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಅನೇಕ ಜೀವಸತ್ವಗಳು, ಖನಿಜಗಳು ಮತ್ತು ಎಲೆಕ್ಟ್ರೋಲೈಟ್ಗಳಲ್ಲಿ ಸಮೃದ್ಧವಾಗಿದೆ.
ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.