ಮೊಸರು ಅಥವಾ ಮಜ್ಜಿಗೆ ದೇಹಕ್ಕೆ ಯಾವುದು ಉತ್ತಮ ?

Ranjitha R K
May 19,2025

ಮೊಸರು ಅಥವಾ ಮಜ್ಜಿಗೆ

ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಜನ ಮೊಸರು ಅಥವಾ ಮಜ್ಜಿಗೆ ಸೇವನೆ ಮಾಡುತ್ತಾರೆ.

ಯಾವುದು ಉತ್ತಮ

ಮೊಸರು ಮತ್ತು ಮಜ್ಜಿಗೆಯ ಪೈಕಿ ದೇಹಕ್ಕೆ ಯಾವುದು ಉತ್ತಮ ಎನ್ನುವ ಸತ್ಯ ನಿಮಗೆ ತಿಳಿದಿದೆಯೇ? ಇಲ್ಲಾ ಎಂದಾದರೆ ಈ ಸ್ಟೋರಿ ನೋಡಿ.

ಮೊಸರಿನ ಪೋಷಕಾಂಶ

ಮೊಸರನ್ನು ಹಾಲಿನಿಂದ ತಯಾರಿಸಲಾಗುತ್ತದೆ. ಮೊಸರಿನಲ್ಲಿ ಪ್ರೋಬಯೋಟಿಕ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದರಲ್ಲಿ ಕ್ಯಾಲ್ಷಿಯಂ, ಪ್ರೋಟಿನ್, ವಿಟಮಿನ್ ೧೨, ಮತ್ತು ಉತ್ತಮ ಬ್ಯಾಕ್ಟಿರಿಯಾ ಇರುತ್ತದೆ.

ಮಜ್ಜಿಗೆಯ ಪ್ರಯೋಜನ

ಮಜ್ಜಿಗೆಯನ್ನು ಮೊಸರಿನಿಂದ ತಯಾರಿಸಲಾಗುತ್ತದೆ. ಆದ್ರೆ ಇದು ಮೊಸರಿಗೆ ಹೋಲಿಸಿದರೆ ಬಹಳ ಲೈಟ್ ಆಗಿರುತ್ತದೆ. ಆಯುರ್ವೇದದಲ್ಲಿ ಮಜ್ಜಿಗೆಯ್ ಅಹೆಚ್ಚಿನ ಪ್ರಯೋಜನಗಳನ್ನು ಹೇಳಲಾಗಿದೆ.

ಮಜ್ಜಿಗೆಯ ರುಚಿ

ಇದರಲ್ಲಿ ಕೆಲವು ಮಸಾಲೆಯನ್ನು ಸೇರಿಸಬಹುದು. ಇದರಿಂದಾಗಿ ಮಜ್ಜಿಗೆಯ ರುಚಿ ಹೆಚ್ಚುತ್ತದೆ. ಇದರಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇರುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಇದು ಸಹಕಾರಿ. ಇದು ಉದರದ ಆರೋಗ್ಯವನ್ನು ಕಾಪಾಡುತ್ತದೆ. ದೇಹವನ್ನು ತಂಪಾಗಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

ಇದೇ ಬೆಸ್ಟ್

ಮೊಸರು ಮತ್ತು ಮಜ್ಜಿಗೆಯಲ್ಲಿ ಮಜ್ಜಿಗೆ ಆರೋಗ್ಯಕ್ಕೆ ಹೆಚ್ಚು ಉತ್ತಮ. ಇದನ್ನು ಸೇವಿಸುವುದರಿಂದ ದೇಹ ತಂಪಾಗಿರುತ್ತದೆ. ನಿರ್ಜಲೀಕರಣದಿಂದಲೂ ಪರಿಹಾರ ಸಿಗುತ್ತದೆ. ಜೀರ್ಣಕ್ರಿಯೆ ಉತ್ತಮ ರೀತಿಯಲ್ಲಿ ಆಗುವುದು.

ಸೂಚನೆ :

ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.

VIEW ALL

Read Next Story