ಬಿಸಿ ನೀರಿಗೆ ಈ ಪುಡಿ ಹಾಕಿ ಕುಡಿದರೆ ನಾರ್ಮಲ್ ಆಗುವುದು ಬ್ಲಡ್ ಶುಗರ್ !

Ranjitha R K
Jul 17,2025

ರಕ್ತದಲ್ಲಿನ ಸಕ್ಕರೆ

ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಮುಖ್ಯ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಂಟ್ರೋಲ್ ನಲ್ಲಿ ಇಡದಿದ್ದರೆ ಅದು ಅನೇಕ ರೋಗಗಳನ್ನು ಜೊತೆಯಲ್ಲಿ ಹೊತ್ತುಕೊಂಡು ಬರುತ್ತದೆ.

ರಕ್ತದಲ್ಲಿನ ಗ್ಲೂಕೋಸ್

ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇರುವ ಸುಲಭ ಮತ್ತು ಪರಿಣಾಮಕಾರಿ ಮನೆ ಮದ್ದು ಎಂದರೆ ದಾಲ್ಚಿನ್ನಿ ಅಥವಾ ಚಕ್ಕೆ ನೀರು.

ರಕ್ತದಲ್ಲಿನ ಸಕ್ಕರೆ

ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ವೇಗವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ನೀರನ್ನು ತಯಾರಿಸಲು ಒಂದು ಸರಿಯಾದ ವಿಧಾನ ಮತ್ತು ಕುಡಿಯಲು ನಿರ್ದಿಷ್ಟ ಸಮಯ ಎನ್ನುವುದಿದೆ.

ಮಧುಮೇಹದಲ್ಲಿ ದಾಲ್ಚಿನ್ನಿ

ಆಯುರ್ವೇದದಲ್ಲಿ, ದಾಲ್ಚಿನ್ನಿಯನ್ನು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಔಷಧವೆಂದು ಕರೆಯಲಾಗುತ್ತದೆ. ದಾಲ್ಚಿನ್ನಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ.

ದಾಲ್ಚಿನ್ನಿ ನೀರನ್ನು ಹೇಗೆ ತಯಾರಿಸುವುದು ?:

ಒಂದು ಲೋಟ ನೀರನ್ನು ಕುದಿಯಲು ಇರಿಸಬೇಕು. ಈ ನೀರಿನಲ್ಲಿ ಅರ್ಧ ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಮಿಶ್ರಣ ಮಾಡಿ ಚೆನ್ನಾಗಿ ಕುದಿಸಬೇಕು. ನಂತರ ಈ ನೀರನ್ನು ಶೋಧಿಸಿ ಕುಡಿಯಬೇಕು.

ದಾಲ್ಚಿನ್ನಿಯ ಪ್ರಯೋಜನಗಳು :

ಈ ಮಸಾಲೆಯಲ್ಲಿ ಸಿನ್ನಮಾಲ್ಡಿಹೈಡ್‌ನಂತಹ ಸಕ್ರಿಯ ಸಂಯುಕ್ತಗಳು ಕಂಡುಬರುತ್ತವೆ. ಇದು ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಇದು ದೇಹದ ಜೀವಕೋಶಗಳು ಗ್ಲೂಕೋಸ್ ಅನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಯಾವಾಗ ಸೇವಿಸಬೇಕು ? :

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದಾಲ್ಚಿನ್ನಿ ನೀರನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿಯಾಗಿದೆ. ಊಟ ಮಾಡಿದ ನಂತರವೂ ದಾಲ್ಚಿನ್ನಿ ನೀರನ್ನು ಕುಡಿಯಬಹುದು.

ಇದನ್ನು ನೆನಪಿನಲ್ಲಿಡಿ :

ನೀವು ಯಾವುದೇ ರೀತಿಯ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ದಾಲ್ಚಿನ್ನಿ ನೀರನ್ನು ಕುಡಿಯುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ, ಈ ನೀರನ್ನು ಕುಡಿಯುವುದರಿಂದ ಔಷಧಿಗಳೊಂದಿಗೆ ರಿಯಾಕ್ಟ್ ಮಾಡಬಹುದು.

VIEW ALL

Read Next Story