ಮೂತ್ರಪಿಂಡದ ಆರೋಗ್ಯ

ಮೂತ್ರಪಿಂಡ ಅಥವಾ ಕಿಡ್ನಿ ನಮ್ಮ ದೇಹದ ಬಹಳ ಮುಖ್ಯ ಅಂಗ. ಮೂತ್ರಪಿಂಡ ಆರೋಗ್ಯವಾಗಿದ್ದರೆ, ದೇಹ ಸರಿಯಾಗಿ ಕಾರ್ಯ ನಿರ್ವಹಿಸುವುದು ಸಾಧ್ಯವಾಗುತ್ತದೆ.

Ranjitha R K
Jan 20,2023

ರಕ್ತವನ್ನು ಶುದ್ಧಗೊಳಿಸುತ್ತದೆ

ದೇಹದಿಂದ ಹೆಚ್ಚುವರಿ ದ್ರವವನ್ನು ಹೊರ ಹಾಕುವ ಕೆಲಸವನ್ನು ಮೂತ್ರಪಿಂಡ ಮಾಡುತ್ತದೆ. ಇದು ರಕ್ತವನ್ನು ಶುದ್ಧಗೊಳಿಸುತ್ತದೆ.

ಇತರ ಅಂಗಗಳ ಮೇಲೆ ಪರಿಣಾಮ

ಮೂತ್ರ ಪಿಂಡದ ಸ್ವಾಸ್ಥ್ಯ ಕೆಟ್ಟರೆ ಅದು ದೇಹದ ಇತರ ಅಂಗಗಳ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಮೂತ್ರಪಿಂಡದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಕಾಲುಗಳಲ್ಲಿ ಅದರ ಲಕ್ಷಣಗಳು ಗೋಚರಿಸುತ್ತವೆ.

ಕಾಲುಗಳಲ್ಲಿ ನೋವು

ಸ್ವಲ್ಪ ನಡೆದರೂ ಅಥವಾ ಯಾವುದೇ ಸಣ್ಣ ಕೆಲಸ ಮಾಡಿದರೂ ಸುಸ್ತಾಗುತ್ತದೆ. ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಒಣ ಮತ್ತು ಒರಟು ಚರ್ಮ

ಮೂತ್ರಪಿಂಡಗಳು ದೇಹದಿಂದ ವಿಷವನ್ನು ಹೊರ ಹಾಕಲು ಸಾಧ್ಯವಾಗದೇ ಹೋದಾಗ, ದೇಹದಲ್ಲಿ ಕೆಂಪು ರಕ್ತ ಕಣಗಳ ವೃದ್ದಿಯಾಗುವುದಿಲ್ಲ. ಇದು ದುರ್ಬಲ ಮೂಳೆಗಳು ಮತ್ತು ಒರಟು ಚರ್ಮಕ್ಕೆ ಕಾರಣವಾಗುತ್ತದೆ.

ಸ್ನಾಯು ಸೆಳೆತ

ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗಿ, ರಂಜಕವನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗದಿದ್ದಾಗ, ಸ್ನಾಯು ಸೆಳೆತ ಪ್ರಾರಂಭವಾಗುತ್ತದೆ.

ಪಾದಗಳಲ್ಲಿ ನೋವು

ದೇಹದಲ್ಲಿ ಟಾಕ್ಸಿನ್‌ಗಳು ಅಧಿಕವಾಗಿ ಸಂಗ್ರಹವಾದಾಗ, ಅದು ನೇರವಾಗಿ ಪಾದಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಪಾದಗಳು ಊದಿಕೊಳ್ಳುತ್ತವೆ.

ಪಾದಗಳು ಊದಿಕೊಳ್ಳುವುದು

ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದಾಗ ಸೋಡಿಯಂ ರಿಟೆನ್ಶನ್ ನಿಂದಾಗಿ ಪಾದಗಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕಾಲ್ಬೆರಳುಗಳು ಊದಿಕೊಳ್ಳುತ್ತವೆ.

VIEW ALL

Read Next Story