ಈ ಸಮಸ್ಯೆ ಇರುವವರು ಇಂಗು ಸೇವಿಸಲೇಬಾರದು
ಆಹಾರದ ರುಚಿಯನ್ನು ಹೆಚ್ಚಿಸುವ ಇಂಗು ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಅಪಾಯಕಾರಿ ಎನ್ನಲಾಗಿದೆ. ಹಾಗಾಗಿಯೇ, ಕೆಲವರಿಗೆ ಇಂಗು ಸೇವಿಸದಂತೆ ಸಲಹೆ ನೀಡಲಾಗುತ್ತದೆ.
ಸ್ವಭಾವತಃ ಬಿಸಿಯಾಗಿರುವ ಇಂಗು ಪಿತ್ತದ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ.
ಹೊಟ್ಟೆ ಹುಣ್ಣಿನ ಸಮಸ್ಯೆ ಇರುವವರಿಗೂ ಕೂಡ ಇಂಗು ಸೇವನೆ ಅಪಾಯಕಾರಿ ಎನ್ನಲಾಗುತ್ತದೆ.
ಮೊದಲೇ ತಿಳಿಸಿದಂತೆ ಇಂಗು ಬಿಸಿ ಸ್ವಭಾವತಃ ಬಿಸಿಯಾಗಿರುತ್ತದೆ.ಹಾಗಾಗಿ, ಗರ್ಭಾವಸ್ಥೆಯಲ್ಲಿ ಇಂತೂ ಸೇವಿಸದಂತೆ ಸೂಚಿಸಲಾಗುತ್ತದೆ.
ನೀವು ಹೈ ಬಿಪಿ ಸಮಸ್ಯೆ ಇರುವವರಾಗಿದ್ದರೆ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ಇಂಗು ಬಳಸುವಲ್ಲಿ ನೀವು ಜಾಗರೂಕರಾಗಿರಬೇಕು.
ಹಾಲುಣಿಸುವ ತಾಯಿ ಇಂಗು ತೆಗೆದುಕೊಳ್ಳಬಾರದು. ಇದು ಮಗುವಿಗೆ ಹಾನಿಕಾರಕವಾಗಬಹುದು.
ಆರೋಗ್ಯ ತಜ್ಞರ ಪ್ರಕಾರ, ಐದು ವರ್ಷದೊಳಗಿನ ಮಕ್ಕಳಿಗೆ ಇಂಗು ನೀಡಬಾರದು.
ದೇಹದಲ್ಲಿ ರಕ್ತಸ್ರಾವ ಅಥವಾ ಸುಡುವ ಸಂವೇದನೆಯ ಸಾಧ್ಯತೆಯಿದ್ದರೆ, ಇಂಗು ಬಳಸಬಾರದು.
ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.