ಅತಿಯಾದ ಜೀರಿಗೆ ಸೇವನೆ ಆರೋಗ್ಯಕ್ಕೆ ಆಪತ್ತು!
ಜೀರಿಗೆ ಅಥವಾ ಜೀರಿಗೆ ನೀರು ಆರೋಗ್ಯಕ್ಕೆ ಹಲವು ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಆದರೆ, ಇದರ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು.
ಜೀರಿಗೆ ಆರೋಗ್ಯಕ್ಕೆ ಪ್ರಯೋಜನಕಾರಿಯೇ ಆಗಿದ್ದರೂ ಸಹ ಇದರ ಅತಿಯಾದ ಬಳಕೆ ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಹಾನಿಗೊಳಿಸಬಹುದು.
ಗರ್ಭಾವಸ್ಥೆಯಲ್ಲಿ ಹೆಚ್ಚಿನ ಜೀರಿಗೆ ಸೇವನೆಯಿಂದ ಅಸ್ವಾಭಾವಿಕ ಜನನ ಚಕ್ರವನ್ನು ಪ್ರಚೋದಿಸಬಹುದು ಎನ್ನಲಾಗುತ್ತದೆ.
ಋತುಚಕ್ರದ ಸಮಯದಲ್ಲಿ ಅತಿಯಾದ ಜೀರಿಗೆ ಸೇವನೆಯಿಂದ ರಕ್ತಸ್ರಾವ ಹೆಚ್ಚಾಗಬಹುದು.
ಕೆಲವರಲ್ಲಿ ಜೀರಿಗೆಯ ಅಧಿಕ ಬಳಕೆಯೂ ಚರ್ಮದ ದದ್ದುಗಳನ್ನು ಉಂಟು ಮಾಡಬಹುದು ಎನ್ನಲಾಗುತ್ತದೆ.
ಅಧಿಕ ಜೀರಿಗೆ ಬಳಕೆಯಿಂದ ಮಧುಮೇಹಿಗಳಿಗೆ ನಿಯಮಿತ ಗ್ಲೂಕೋಸ್ ಮಟ್ಟವನ್ನು ಕಾಯ್ದುಕೊಳ್ಳಲು ತೊಂದರೆ ಉಂಟಾಗಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.