ಶನಿವಾರವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಈ ದಿನ ಶನಿ ದೇವರನ್ನು ಭಕ್ತಿ ಗೌರವದಿಂದ ಪೂಜಿಸಲಾಗುತ್ತದೆ.
ಜಾತಕದಲ್ಲಿ ಶನಿದೋಷ ಇರುವವರು ಅದನ್ನು ಹೋಗಲಾಡಿಸಲು ಶನಿದೇವನನ್ನು ಭಕ್ತಿಯಿಂದ ಪೂಜಿಸುತ್ತಾರೆ.
ಶನಿದೇವನ ಕೋಪವು ತುಂಬಾ ಅಪಾಯಕಾರಿ, ಮನಸ್ಸು ಶುದ್ಧವಾಗಿಟ್ಟುಕೊಂಡು ಶನಿದೇವರನ್ನ ಭಕ್ತಿಯಿಂದ ಪೂಜಿಸಬೇಕು.
ನೀವು 51 ಶನಿವಾರ ಶನಿದೇವರ ಹೆಸರಿನಲ್ಲಿ ಉಪವಾಸ ವ್ರತ ಇಟ್ಟುಕೊಂಡು, ಮಂತ್ರ ಪಠಿಸಿದರೆ ಪ್ರಯೋಜನಕಾರಿಯಾಗುತ್ತದೆ.
ಶನಿದೇವರು ನಿಮ್ಮ ಮೇಲೆ ಕೋಪಗೊಂಡಿದ್ದರೆ ʼಓಂ ಪ್ರಾಂ ಪ್ರೀಂ ಪ್ರಾಂ ಸ: ಶನಯೇ ನಮಃʼ ಮಂತ್ರ ಪಠಿಸಿದರೆ ಪ್ರಯೋಜನವಾಗುತ್ತದೆ.
ಶನಿದೇವರಿಗೆ ಎಳ್ಳು ಅಥವಾ ಸಾಸಿವೆ ಎಣ್ಣೆ ಅರ್ಪಿಸಿ ಕಪ್ಪು ಬಟ್ಟೆಗಳನ್ನು ದಾನ ಮಾಡಿದರೆ ನಿಮಗೆ ಲಾಭದಾಯಕವಾಗಿರುತ್ತದೆ.
ಶನಿ ದೋಷ ಕಂಟಕ ಎದುರಿಸುತ್ತಿರುವವರು ಅರಳಿ ಮರವನ್ನು ಪೂಜಿಸಬೇಕು ಮತ್ತು ಅದಕ್ಕೆ ನೀರನ್ನು ಅರ್ಪಿಸಬೇಕು.
ಹಿಂದೂ ಧರ್ಮದಲ್ಲಿ ಅರಳಿ ಮರವನ್ನ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದ್ದು, ಹೀಗೆ ಮಾಡಿದ್ರೆ ನಿಮ್ಮ ಸಮಸ್ಯೆಗಳು ಕಡಿಮೆಯಾಗಬಹುದು.