ಸಕ್ಕರೆ ಕೇವಲ ಸಿಹಿ ಹೊಂದಿದೆ ಎಂಬುದನ್ನ ಹೊರತುಪಡಿಸಿದ್ರೆ ಆರೋಗ್ಯಕ್ಕೆ ಮಾರಕವಾಗಿರುವ ಒಂದು ಪದಾರ್ಥವಾಗಿದೆ.
ರುಚಿಯಲ್ಲಿ ಅಪರಿಮಿತ ಸಿಹಿಯಿದ್ದರೂ ಸಕ್ಕರೆ ನಮ್ಮ ಆರೋಗ್ಯಕ್ಕೆ ಯಾವುದೇ ರೀತಿ ಪ್ರಯೋಜನವಿಲ್ಲ.
ಸಕ್ಕರೆಯು ಬಹುತೇಕ ಜನರ ದಿನನಿತ್ಯದ ಆಹಾರಗಳಲ್ಲಿ ಕಡ್ಡಾಯ ಪದಾರ್ಥವಾಗಿದೆ.
ನಾಲಗೆಗೆ ಅದ್ಭುತ ರುಚಿ ಕೊಡುವ ಈ ಸಕ್ಕರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ.
ಸಕ್ಕರೆ ಸೇವನೆಯಿಂದ ನಿಮ್ಮ ದೇಹದ ತೂಕ ಹೆಚ್ಚಳವಾಗಲಿದ್ದು, ಬೊಜ್ಜು ಬೆಳೆಯುತ್ತದೆ.
ಸಕ್ಕರೆ ಸೇವನೆಯು ದೇಹವು ಇನ್ಸುಲಿನ್‌ಗೆ ಕಡಿಮೆ ಪ್ರತಿಕ್ರಿಯಿಸುವಂತೆ ಮಾಡುತ್ತದೆ, ಇದು ಟೈಪ್ 2 ಮಧುಮೇಹದ ಸಮಸ್ಯೆಯನ್ನ ಹೆಚ್ಚಿಸುತ್ತದೆ.
ಸಕ್ಕರೆ ಸೇವನೆಯು ಅಧಿಕ ರಕ್ತದೊತ್ತಡ, ಕೊಬ್ಬಿನ ಯಕೃತ್ತು ಮತ್ತು ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗುತ್ತದೆ.
ಅತಿಯಾದ ಸಕ್ಕರೆ ಸೇವನೆಯಿಂದ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.