ಕರಿಬೇವಿನ ಪ್ರಯೋಜನ

ಕರಿಬೇವಿನ ಎಲೆಗಳನ್ನು ಭಾರತದ ಪ್ರತಿ ಅಡುಗೆಮನೆಯಲ್ಲೀ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಬೇಕೇ ಬೇಕು.

Chetana Devarmani
Apr 18,2023

ಕರಿಬೇವಿನ ಪ್ರಯೋಜನ

ಆಹಾರದ ರುಚಿಯನ್ನು ಕರಿಬೇವು ಹೆಚ್ಚಿಸುತ್ತದೆ, ಅಲ್ಲದೇ ಘಮ ನೀಡುತ್ತದೆ. ಇದರಲ್ಲಿ ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ವಿಟಮಿನ್‌ಗಳು ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು ಇವೆ.

ಕರಿಬೇವಿನ ಪ್ರಯೋಜನ

ಪ್ರತಿದಿನ ಬೆಳಿಗ್ಗೆ 3 ರಿಂದ 4 ಹಸಿರು ಕರಿಬೇವು ಎಲೆಗಳನ್ನು ಅಗಿದು ತಿಂದರೆ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.

ಕರಿಬೇವಿನ ಪ್ರಯೋಜನ

ರಾತ್ರಿ ಕುರುಡು ಅಥವಾ ಕಣ್ಣುಗಳಿಗೆ ಸಂಬಂಧಿಸಿದ ಇತರ ಅನೇಕ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಕರಿಬೇವಿನ ಪ್ರಯೋಜನ

ಕರಿಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹಿಗಳಿಗೆ ಹೆಚ್ಚಾಗಿ ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನಲು ಸಲಹೆ ನೀಡಲಾಗುತ್ತದೆ.

ಕರಿಬೇವಿನ ಪ್ರಯೋಜನ

ಕರಿಬೇವಿನ ಎಲೆಗಳನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಕರಿಬೇವಿನ ಪ್ರಯೋಜನ

ಕರಿಬೇವಿನ ಎಲೆಗಳನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಮಲಬದ್ಧತೆ, ಅಸಿಡಿಟಿ, ಹೊಟ್ಟೆ ಉಬ್ಬುವುದು ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ.

ಕರಿಬೇವಿನ ಪ್ರಯೋಜನ

ಕರಿಬೇವಿನ ಎಲೆಗಳನ್ನು ಜಗಿಯುವುದು ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

VIEW ALL

Read Next Story