ಆರ್ಥರೈಟಿಸ್​ ರೋಗ ನಿಯಂತ್ರಿಸುತ್ತದೆ ತುಳಸಿಯಲ್ಲಿರುವ ಎಜಿನಾಲ್​ ಎಂಬ ರಾಸಾಯನಿಕ ಗಂಟುಗಳಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.

Zee Kannada News Desk
May 20,2023


ಹಲ್ಲಿನ ಮತ್ತು ಬಾಯಿಯ ಆರೋಗ್ಯ ಕಾಪಾಡುತ್ತದೆ ತುಳಸಿಯಲ್ಲಿರುವ ಔಷಧೀಯ ಗುಣಗಳು ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳ ವಿರುದ್ಧ ಹೋರಾಡುತ್ತದೆ. ಇದು ಮೌಥ್​ ಫ್ರೆಷನರ್​ನಂತೆ ಕೆಲಸ ಮಾಡುತ್ತದೆ.


ಸಕ್ಕರೆ ಪ್ರಮಾಣ ನಿಯಂತ್ರಿಸುತ್ತದೆ ಹಾಲು ಹಾಕಿದ ಟೀ ಕುಡಿಯುವ ಬದಲು ತುಳಸಿ ಟೀ ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ದಿನನಿತ್ಯ ತುಳಸಿ ಟೀ ಕುಡಿಯುವುದರಿಂದ ದೇಹದಲ್ಲಿ ಕೊಬ್ಬಿನಂಶ ಕಡಿಮೆಯಾಗುತ್ತದೆ. ಇದರಿಂದ ಸಕ್ಕರೆ ಅಂಶ ಶಕ್ತಿಯಾಗಿ ಪರಿವರ್ತನೆ ಹೊಂದಲು ಸಹಕಾರಿಯಾಗುತ್ತದೆ.


ಸ್ಟ್ರೆಸ್​ ಕಡಿಮೆ ಮಾಡುತ್ತದೆ ನಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಂದಾಗಿ. ನಮ್ಮ ಮಿದುಳಿನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಸ್ಟ್ರೆಸ್​ ಇದ್ದೇ ಇರುತ್ತದೆ. ಇದನ್ನು ಕಡಿಮೆ ಮಾಡುವಲ್ಲಿ ತುಳಸಿ ಟೀ ಉಪಯುಕ್ತವಾಗಿದ್ದು, ಸ್ಟ್ರೆಸ್​ ಹಾರ್ಮೋನ್​ ಎಂದೇ ಗುರುತಿಸಲ್ಪಟ್ಟಿರುವ ಕೋರ್ಟಿಸೋಲ್​ ಪ್ರಮಾಣವನ್ನು ನಿಂತ್ರಣದಲ್ಲಿಡುತ್ತದೆ. ಇದರಿಂದ ನಮ್ಮ ದೇಹ, ಮನಸ್ಸು ಸ್ಟ್ರೆಸ್​ನಿಂದ ಮುಕ್ತವಾಗುತ್ತದೆ.


ಉಸಿರಾಟದ ತೊಂದರೆ ತುಳಸಿ ಟೀ ನೆಗಡಿ, ಕೆಮ್ಮು, ಅಸ್ತಮಾ ಸೇರಿದಂತೆ ಹಲವು ಉಸಿರಾಟದ ತೊಂದರೆಗಳನ್ನು ಗುಣಪಡಿಸುತ್ತದೆ. ಮುಖ್ಯವಾಗಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಕೆಮ್ಮನ್ನು ನಿಯಂತ್ರಿಸುತ್ತದೆ, ಕಫದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

VIEW ALL

Read Next Story