ಕೊಲೆಸ್ಟ್ರಾಲ್ ಒಂದು ಮೇಣದಂಥ, ಕೊಬ್ಬಿನಂತಹ ವಸ್ತುವಾಗಿದ್ದು, ಅದು ದೇಹಕ್ಕೆ & ಉತ್ತಮ ಆರೋಗ್ಯಕ್ಕೆ ಬೇಕಾಗುತ್ತದೆ.
ಕೊಲೆಸ್ಟ್ರಾಲ್‌ನ ಅನಾರೋಗ್ಯಕರ ಮಟ್ಟವು ಅಧಿಕ ರಕ್ತದ ಕೊಲೆಸ್ಟ್ರಾಲ್ ಸ್ಥಿತಿಗೆ ಕಾರಣವಾಗಲಿದ್ದು, ಇದು ಜೀವಕ್ಕೆ ಹಾನಿಕಾರಕ.
40 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ನ ಸಮಸ್ಯೆ ಹೆಚ್ಚು ಸಾಮಾನ್ಯವಾಗಿದೆ.
ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಕೆಟ್ಟ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿದ್ದಾರೆ.
ಅಧಿಕ ತೂಕ ಮತ್ತು ವ್ಯಾಯಾಮದ ಕೊರತೆಯಿಂದಲೂ ಸಹ ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ ಉದ್ಭವಿಸುತ್ತದೆ.
ಧೂಮಪಾನ & ಮಧ್ಯಪಾನವು ನಿಮ್ಮ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿ ಕೆಟ್ಟ ಕೊಲೆಸ್ಟ್ರಾಲ್ ಅನ್ನ ಹೆಚ್ಚಿಸುತ್ತದೆ.
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಎದೆನೋವು, ಹೃದಯಾಘಾತ, ಸ್ಟ್ರೋಕ್ ಮತ್ತು ಕಿಡ್ನಿ ಸಮಸ್ಯೆ ಬರುತ್ತದೆ.