ಒಂದು ತಿಂಗಳು ಈರುಳ್ಳಿ ತಿನ್ನೋದು ಬಿಟ್ರೆ ಏನಾಗುತ್ತೆ ಗೊತ್ತಾ?
ಈರುಳ್ಳಿಯಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇವು ದೇಹವನ್ನು ಆರೋಗ್ಯವಾಗಿಡಲು ಅವು ತುಂಬಾ ಸಹಾಯ ಮಾಡುತ್ತವೆ.
ಈರುಳ್ಳಿ ಸರ್ಕಾರಗಳನ್ನೂ ಉರುಳಿಸುತ್ತದೆ. ಎಲ್ಲರ ಕಣ್ಣಂಚನ್ನು ತೇವಗೊಳಿಸುವ ಶಕ್ತಿ ಹೊಂದಿರುವ ಈರುಳ್ಳಿಯನ್ನು ಒಂದು ತಿಂಗಳ ಕಾಲ ಸೇವಿದಿದ್ದರೆ ನಾನಾ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ವೈದ್ಯರು.
ನಿರ್ದಿಷ್ಟವಾಗಿ ಹೇಳುವುದಾದರೆ, ಈರುಳ್ಳಿಯಲ್ಲಿ ವಿಟಮಿನ್ ಸಿ, ಬಿ 6 ಇದ್ದು, ಇವೆಲ್ಲವೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಈರುಳ್ಳಿ ಕ್ಯಾನ್ಸರ್ ವಿರೋಧಿ ಗುಣಗಳನ್ನು ಸಹ ಹೊಂದಿದೆ.
ಒಂದು ತಿಂಗಳು ಈರುಳ್ಳಿ ತಿನ್ನುವುದನ್ನು ನಿಲ್ಲಿಸಿದರೆ ದೇಹದ ಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆ ಆಗುವುದಿಲ್ಲ. ಆದರೆ ಕೆಲವು ಸೂಕ್ಷ್ಮ ಬದಲಾವಣೆಗಳು ಸಂಭವಿಸುವುದು ಖಚಿತ.
ಈರುಳ್ಳಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಇದನ್ನು ತಿನ್ನದೇ ಇದ್ದರೆ ಮಲಬದ್ಧತೆ ಉಂಟಾಗುತ್ತದೆ.
ಈರುಳ್ಳಿ ಸೇವನೆಯನ್ನು ನಿಲ್ಲಿಸಿದರೆ ಕೆಂಪು ರಕ್ತ ಕಣಗಳ ಮೇಲೆ ಅಡ್ಡಪರಿಣಾಮವುಂಟಾಗುತ್ತದೆ..