ರಾತ್ರಿ ಮಲಗುವ ಮುನ್ನ ಚಿಯಾ ಬೀಜಗಳನ್ನು ತಣ್ಣೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಚಿಯಾ ಬೀಜಗಳಲ್ಲಿ ಕರಗದ ನಾರು, ಪ್ರೋಟೀನ್, ಆರೋಗ್ಯಕರ ಕೊಬ್ಬು, ಕ್ಯಾಲ್ಸಿಯಂ, ಮ್ಯಾಂಗನೀಸ್, ಮೆಗ್ನೀಸಿಯಮ್ & ರಂಜಕ ಮುಂತಾದ ಪೋಷಕಾಂಶಗಳಿವೆ.
ಚಿಯಾ ಬೀಜಗಳು ಆಂಟಿ ಆಕ್ಸಿಡೆಂಟು ಅಥವಾ ಉತ್ಕರ್ಷಣ ನಿರೋಧಕ ಗುಣಗಳ ಸಮೃದ್ಧ ಮೂಲವಾಗಿದ್ದು, ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತವೆ.
ಚಿಯಾ ಬೀಜಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರಿನಂಶವಿದ್ದು, ನಿಮ್ಮ ಜೀರ್ಣಕ್ರಿಯೆಗೆ ಉತ್ತೇಜನ ನೀಡುತ್ತದೆ ಮತ್ತು ಕರುಳಿನಲ್ಲಿ ಆಹಾರದ ಚಲನೆ ಸುಗಮಗೊಳ್ಳುತ್ತದೆ.
ತೂಕ ಇಳಿಸುವ ಪ್ರಯತ್ನದಲ್ಲಿರುವವರಿಗೆ ಆರೋಗ್ಯಕರ ಜೀರ್ಣಕ್ರಿಯೆ ಅತಿ ಮಹತ್ವದ್ದಾಗಿದ್ದು, ಚಿಯಾ ಬೀಜಗಳು ಇದಕ್ಕೆ ಅತಿ ಹೆಚ್ಚಿನ ಬೆಂಬಲವನ್ನು ಒದಗಿಸುತ್ತವೆ.
ಸುಲಭವಾಗಿ ತೂಕ ಇಳಿಸಿಕೊಳ್ಳಬೇಕು ಅಂದರೆ ನೀವು ಪ್ರತಿದಿನವೂ ಚಿಯಾ ಬೀಜಗಳನ್ನು ಸೇವಿಸಬೇಕು. ವೈದ್ಯರ ಸಲಹೆಯೊಂದಿಗೆ ಸೇವಿಸುವುದು ಉತ್ತಮ.
ಒಮೆಗಾ -3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುವ ಚಿಯಾ ಬೀಜಗಳು ಹೃದಯದ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ.