ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವಾಲ್ನಟ್ ತಿನ್ನುವುದರಿಂದ ಅನೇಕ ಪ್ರಯೋಜನಗಳು ಸಿಗುತ್ತವೆ.
ವಾಲ್ನಟ್ ಬೀಜಗಳ ಸೇವನೆಯು ನಮ್ಮ ಮೆದುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತವೆ.
ವಾಲ್ನಟ್ ಒಮೆಗಾ 3 ಫ್ಯಾಟಿ ಆಮ್ಲಗಳ ಪ್ರಮಾಣ ಹೇರಳವಾಗಿದ್ದು, ಮೆದುಳಿನ ಕಾರ್ಯ ಚಟುವಟಿಕೆಯನ್ನು ಅಭಿವೃದ್ಧಿಪಡಿಸುತ್ತದೆ.
ಪ್ರತಿದಿನ ವಾಲ್ನಟ್ ಬೀಜಗಳನ್ನ ನೆನೆಸಿ ತಿನ್ನುವುದರಿಂದ ನಮ್ಮ ಮಾನಸಿಕ ಅರಿವು, ನೆನಪಿನ ಶಕ್ತಿ ಮತ್ತು ಬುದ್ಧಿವಂತಿಕೆ ಹೆಚ್ಚಾಗುತ್ತದೆ.
ವಾಲ್ನಟ್ ಆರೋಗ್ಯಕರ ಕೊಬ್ಬು ಹಾಗೂ ಆಂಟಿಆಕ್ಸಿಡೆಂಟ್ ಅಂಶ ಒಳಗೊಂಡಿದ್ದು, ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನ ಕಡಿಮೆ ಮಾಡುತ್ತವೆ.
ವಾಲ್ನಟ್ ರಕ್ತದೊತ್ತಡವನ್ನ ಆರೋಗ್ಯಕರವಾಗಿ ನಿರ್ವಹಿಸುವ ಮೂಲಕ ಹೃದಯಕ್ಕೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುತ್ತದೆ.
ನೆನೆಸಿದ ವಾಲ್ನಟ್ ಸೇವನೆಯಿಂದ ಮಲಬದ್ಧತೆ, ಅಜೀರ್ಣತೆ ಹಾಗೂ ಹೊಟ್ಟೆ ಉಬ್ಬರ ಸಮಸ್ಯೆಯಿಂದ ನಿಮಗೆ ಮುಕ್ತಿ ದೊರೆಯುತ್ತದೆ.
ನಮ್ಮ ದೇಹದ ತೂಕವನ್ನು ನಿರ್ವಹಣೆ ಮಾಡುವಲ್ಲಿ ವಾಲ್ನಟ್ ಬೀಜಗಳು ಸಹಕಾರಿಯಾಗಿವೆ.