ಪನೀರ್‌ನಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಮತ್ತು ಸ್ಯಾಚುರೇಟೆಡ್ ಕೊಬ್ಬು ಇರುವುದರಿಂದ ಅತಿಯಾಗಿ ತಿಂದರೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿ, ತೂಕ ಹೆಚ್ಚಾಗಬಹುದು.
ಪನೀರ್‌ನಲ್ಲಿ ಸೋಡಿಯಂ ಅಂಶ ಹೆಚ್ಚಿರುವುದರಿಂದ ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ಇದು ಹಾನಿಕಾರಕ.
ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರಲ್ಲಿ ಅತಿಸಾರ ಮತ್ತು ಉಬ್ಬರದಂತಹ ಸಮಸ್ಯೆಗಳು ಉಂಟಾಗಬಹುದು.
ಕಲಬೆರಕೆ ಪನೀರ್ ಅಥವಾ ಕಳಪೆ ಗುಣಮಟ್ಟದ ಪನೀರ್ ಸೇವನೆಯಿಂದ ಆಹಾರ ವಿಷ, ಅಲರ್ಜಿ ಅಥವಾ ಇತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಪನೀರ್ ಅನ್ನ ಮಿತ ಪ್ರಮಾಣದಲ್ಲಿ ಸೇವಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ.
ಸಸ್ಯಾಹಾರಿಗಳಿಗೆ, ಸೋಯಾ ಚಂಕ್ಸ್ ಅಥವಾ ತೋಫುಗಳಂತಹ ಕಡಿಮೆ ಕೊಬ್ಬಿನ ಪ್ರೋಟೀನ್ ಮೂಲಗಳನ್ನ ಆಯ್ಕೆ ಮಾಡಬಹುದು.
ಯಾವಾಗಲೂ ಉತ್ತಮ ಗುಣಮಟ್ಟದ ಮತ್ತು ಸ್ವಚ್ಛ ಪನೀರ್ ಅನ್ನ ಖರೀದಿಸಿ ಸೇವಿಸುವುದು ಉತ್ತಮ.