ಅತಿಯಾದ ಸಕ್ಕರೆ ಸೇವನೆಯು ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದ ವಿಚಾರ.
ಅಧಿಕ ಪ್ರಮಾಣದ ಸಕ್ಕರೆ ಸೇವನೆಯು ಮಾನವನ ಮೆದುಳಿನ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ.
ನಾವು ಸಿಹಿ ಪದಾರ್ಥ ಸೇವಿಸಿದಾಗ ನಮ್ಮ ಮೆದುಳಿನಲ್ಲಿ ರಾಸಾಯನಿಕ ಕ್ರಿಯೆಯನ್ನ ಪ್ರಚೋದಿಸುತ್ತದೆ. ಇದರಿಂದ ಮೆದುಳಿನ ಪ್ರತಿಫಲ ವ್ಯವಸ್ಥೆಯಲ್ಲಿ ಡೋಪಮೈನ್ ಮತ್ತು ಸಿರೊಟೋನಿನ್‌ನಂತಹ ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ.
ಆದರೆ ಮಿತಿ ಮೀರಿ ಸಕ್ಕರೆಯನ್ನು ಸೇವಿಸಿದಾಗ ಹಾರ್ಮೋನ್‌ಗಳಲ್ಲಿ ಅಸಮತೋಲನ ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಹೆಚ್ಚಿನ ಸಕ್ಕರೆ ಸೇವನೆ ನಿದ್ರಾಹೀನತೆಗೆ ಕಾರಣವಾಗುತ್ತದೆ. ದೇಹವು ಸಕ್ಕರೆಯನ್ನು ಜೀರ್ಣಿಸಿದಾಗ ಕಾರ್ಟಿಸೋಲ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ನಿದ್ರಾಹೀನತೆಗೆ ಕಾರಣವಾಗುತ್ತದೆ.
ಹೆಚ್ಚಿನ ಸಕ್ಕರೆ ಸೇವನೆಯು ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಸಿಹಿ ಆಹಾರಗಳು ಖಿನ್ನತೆಗೂ ಕಾರಣವಾಗುತ್ತದೆ. ಹೆಚ್ಚು ಸಕ್ಕರೆ ಪಾನೀಯ ಸೇವಿಸುವ ಜನರಲ್ಲಿ ಖಿನ್ನತೆಯ ಮಟ್ಟ ಶೇ.23ರಷ್ಟು ಹೆಚ್ಚಿದೆ ಎಂದು ಎಂದು ಅನೇಕ ಅಧ್ಯಯನಗಳು ತೋರಿಸಿವೆ.
ಹೆಚ್ಚಿನ ಸಕ್ಕರೆಯ ಆಹಾರ ಬಳಕೆ ಮೆದುಳಿನ ಭಾಗವಾಗಿರುವ ಹಿಪೊಕ್ಯಾಂಪಸ್ ಮೇಲೆ ತೊಂದರೆ ಉಂಟುಮಾಡುತ್ತದೆ.