ಪ್ರತಿಯೊಬ್ಬರ ವಯಸ್ಸು ಮತ್ತು ದೈಹಿಕ ಚಟುವಟಿಕೆಗಳ ಆಧಾರದ ಮೇಲೆ ಕೊಲೆಸ್ಟ್ರಾಲ್ ಮಟ್ಟವು ಬೇರೆ ಬೇರೆಯಾಗಿರುತ್ತದೆ.
ಕೊಲೆಸ್ಟ್ರಾಲ್ ಮಟ್ಟವು ನಿಮ್ಮ ಆಹಾರ ಪದ್ಧತಿ ಹಾಗೂ ಜೀವನಶೈಲಿಯನ್ನು ಅವಲಂಬಿಸಿರುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ದೇಹಕ್ಕೆ ಬೇಕಾಗಿರುವ ಕೊಲೆಸ್ಟ್ರಾಲ್ ನಿಮ್ಮ ಯಕೃತ್ತಿನಲ್ಲಿ ರೂಪಗೊಳ್ಳುತ್ತದೆ. ನಿಮ್ಮ ದೇಹವು ಅದರ ಕಾರ್ಯನಿರ್ವಹಣೆಗೆ ಬೇಕಾದಷ್ಟು ಕೊಲೆಸ್ಟ್ರಾಲ್ಅನ್ನ ತಯಾರು ಮಾಡುತ್ತದೆ.
ಕೆಲವು ಆಹಾರಗಳ ಸೇವನೆಯಿಂದ ದೇಹಕ್ಕೆ ಕೊಲೆಸ್ಟ್ರಾಲ್ ಲಭಿಸುತ್ತದೆ. ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿದ್ದು, ಒಂದು ಕೆಟ್ಟ ಕೊಲೆಸ್ಟ್ರಾಲ್ ಮತ್ತೊಂದು ಒಳ್ಳೆಯ ಕೊಲೆಸ್ಟ್ರಾಲ್.
ವಯಸ್ಕರಿಗೆ ಒಟ್ಟು ಕೊಲೆಸ್ಟ್ರಾಲ್ ಮಟ್ಟವು ಪ್ರತಿ ಡೆಸಿಲೀಟರ್‌ಗೆ 200 ಮಿಲಿಗ್ರಾಂ (mg/dL) ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಉತ್ತಮ.
ಕೆಟ್ಟ ಕೊಲೆಸ್ಟ್ರಾಲ್ 100 ಮಿಗ್ರಾಂ/DL ಅಥವಾ ಅದಕ್ಕಿಂತ ಕಡಿಮೆ, HDL ಕೊಲೆಸ್ಟ್ರಾಲ್ ಅಥವಾ ಒಳ್ಳೆಯ ಕೊಲೆಸ್ಟ್ರಾಲ್ 60 ಮಿಗ್ರಾಂ/DL, ಅದಕ್ಕಿಂತ ಹೆಚ್ಚು ಹಾಗೂ HDL ಅಲ್ಲದ ಕೊಲೆಸ್ಟ್ರಾಲ್ 130 ಮಿಗ್ರಾಂ/DL ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಒಳ್ಳೆಯದು.
ನಿಮ್ಮ ಕೊಲೆಸ್ಟ್ರಾಲ್ ಮಟ್ಟವು ಈ ಪ್ರಮಾಣದಲ್ಲಿ ಇಲ್ಲದಿದ್ದರೆ ನೀವು ಉತ್ತಮ ಹೃದಯ ರೋಗ ತಜ್ಞರನ್ನು ಭೇಟಿ ಮಾಡಬೇಕಾಗುತ್ತದೆ.
ನಿಯಮಿತ ತಪಾಸಣೆಯು ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.