ಬೇಸಿಗೆ ಕಳೆಯಿತೆಂದರೆ ಮತ್ತೆ ಮಾವಿನ ಸವಿ ಸವಿಯಲು ಮತ್ತೊಂದು ಬೇಸಿಗೆಗೆ ಕಾಯಬೇಕಾಗುತ್ತದೆ. ಆದರೆ ಮಾವನ್ನು ತಿನ್ನುವ ಮೊದಲು ಕೆಲವು ವಿಚಾರಗಳ ಬಗ್ಗೆ ಗಮನ ಹರಿಸಬೇಕು.
ಮಾವಿನಹಣ್ಣುಗಳನ್ನು ಸೇವಿಸುವ ಮೊದಲು ನೀರಿನಲ್ಲಿ ನೆನೆಸುವುದು ಹಳೆಯ ಸಂಪ್ರದಾಯವಾಗಿದೆ. ಆದರೆ ಇದು ಕೆಲವು ನಂಬಲಾಗದ ಪ್ರಯೋಜನಗಳನ್ನು ಹೊಂದಿದೆ.
ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸಿಡುವ ಮೂಲಕ ಅವುಗಳನ್ನು ಕೃತಕವಾಗಿ ಹಣ್ಣಾಗಿಸಲಾಗಿದೆಯೇ ಎನ್ನುವುದನ್ನು ಸುಲಭವಾಗಿ ಪತ್ತೆ ಮಾಡಬಹುದು. ಮಾವು ನೀರಿನಲ್ಲಿ ಮುಳುಗಿದರೆ, ಅವು ನೈಸರ್ಗಿಕವಾಗಿ ಹಣ್ಣಾಗಿರುತ್ತವೆ. ತೇಲುತ್ತಿದ್ದರೆ, ಅವುಗಳನ್ನು ಕೃತಕವಾಗಿ ಹಣ್ಣಾಗಿಸಲಾಗಿದೆ ಎಂದರ್ಥ. ಮಾಡಲಾಗುತ್ತದೆ.
ಮಾವು ವಿವಿಧ ವಿಟಮಿನ್‌ಗಳಲ್ಲಿ ಸಮೃದ್ಧವಾಗಿದ್ದರೂ, ಅದರ ಕಾಂಡವು ಫೈಟಿಕ್ ಆಸಿಡ್ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ. ಇದು ಕಬ್ಬಿಣ, ಸತು ಮತ್ತು ಕ್ಯಾಲ್ಸಿಯಂನಂತಹ ಪ್ರಮುಖ ಖನಿಜಗಳ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಮಾವಿನಹಣ್ಣನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸುವುದರಿಂದ ಹಣ್ಣಿನಲ್ಲಿರುವ ಈ ಪೋಷಕಾಂಶ ವಿರೋಧಿ ಅಂಶವನ್ನು ತೊಡೆದುಹಾಕಬಹುದು.
ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸಿಟ್ಟರೆ ಅದರಲ್ಲಿರುವ ರಾಸಾಯನಿಕ ವಸ್ತುಗಳ ಪರಿಣಾಮ ಕಡಿಮೆಯಾಗುತ್ತದೆ. ಮಾರುಕಟ್ಟೆಯಿಂದ ತಂದ ಹಣ್ಣನ್ನು ನೇರವಾಗಿ ತಿನ್ನುತ್ತಿದ್ದರೆ, ಇಂದೇ ಈ ಅಭ್ಯಾಸವನ್ನು ಬದಲಿಸಿ.
ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸದೇ ತಿಂದರೆ ಮುಖದಲ್ಲಿ ಮೊಡವೆ ಸಮಸ್ಯೆ ಎದ್ದೇಳಬಹುದು.
ಮಾವು ಉಷ್ಣ ಸ್ವಭಾವದ ಗುಣ ಹೊಂದಿರುವುದರಿಂದ ಇದನ್ನು ನೀರಿನಲ್ಲಿ ನೆನೆಸದೆ ತಿಂದರೆ ಹೊಟ್ಟೆಯ ಸಮಸ್ಯೆ ಎದುರಾಗಬಹುದು.
ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸದೆ ತಿಂದರೆ ತೂಕ ಹೆಚ್ಚಾಗುವ ಅಪಾಯ ಕೂಡಾ ಇದೆ. ಏಕೆಂದರೆ ಇದರಲ್ಲಿ ಫೈಟೊಕೆಮಿಕಲ್ ಇದ್ದು ಇದು ತೂಕವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.
ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸಿಡುವ ಅಭ್ಯಾಸವು ಅವುಗಳನ್ನು ಹೆಚ್ಚು ಆರೋಗ್ಯಕರ ಮತ್ತು ಸುರಕ್ಷಿತ ಆಹಾರವನ್ನಾಗಿ ಮಾಡುತ್ತದೆ.