ಫಿಟ್ ಆಗಿರಲು ಬಯಸುವುದಾದರೆ ಊಟ ತಿಂಡಿಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಭೋಜನ ಮುಗಿಸಿದ ಕೂಡಲೇ ಮಾಡುವ ಕೆಲವೊಂದು ತಪ್ಪುಗಳನ್ನು ಬಿಡಬೇಕು.
ಭೋಜನ ಮುಗಿಸಿದ ಕೂಡಲೇ ವ್ಯಾಯಾಮ ಮಾಡಬಾರದು. ಇದರಿಂದ ಜೀರ್ಣ ಕ್ರಿಯೆಯಲ್ಲಿ ಸಮಸ್ಯೆ ಉಂಟಾಗುತ್ತದೆ.
ಭೋಜನ ಮುಗಿಸಿದ ಕೂಡಲೇ ಮಲಗಬಾರದು. ಹೀಗೆ ಮಾಡುವುದರಿಂದಲೂ ಜೀರ್ಣಕ್ರಿಯೆಯ ಸಮಸ್ಯೆ ಉಂಟಾಗುತ್ತದೆ.
ಭೋಜನ ಮುಗಿಸಿದ ಸ್ವಲ್ಪ ಹೊತ್ತಿನವರೆಗೆ ಮುಂದೆ ಬಗ್ಗಿ ಕೆಲಸ ಮಾಡಬಾರದು. ಇದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುವ ಆಸಿಡ್ ಗೆ ತೊಂದರೆಯಾಗುತ್ತದೆ.
ಭೋಜನ ಮುಗಿಸಿದ ಕೂಡಲೇ ಹಣ್ಣು ತಿನ್ನಬಾರದು. ಇದರಿಂದ ಜೀರ್ಣಕ್ರಿಯೆಯ ಸಮಸ್ಯೆ ಉಂಟಾಗುತ್ತದೆ.
ಭೋಜನ ಮುಗಿಸಿದ ಕೂಡಲೇ ಚಹಾ ಕಾಫಿ ಕುಡಿಯಬಾರದು.
ಭೋಜನ ಮುಗಿಸಿದ ಕೂಡಲೇ ಶರಾಬು ಸೇವಿಸಬಾರದು. ಇದು ಆರೋಗ್ಯದ ಮ್ರೆಲೆ ಪರಿಣಾಮ ಬೀರುತ್ತದೆ.
ಊಟ ಮುಗಿಸಿದ ನಂತರ ದೇಹದ ತಾಪಮಾನದಲ್ಲಿ ಬದಲಾವಣೆ ಕಂಡು ಬರುತ್ತದೆ. ಹೀಗಾಗಿ ಉಉತದ ನಂತರ ಸ್ನಾನ ಮಾಡಿದರೆ ಮತ್ತೆ ಸಮಸ್ಯೆ ಎದುರಿಸಬೇಕಾಗಬಹುದು.