ಕೊತ್ತಂಬರಿಯು ಬಹುತೇಕ ಎಲ್ಲಾ ಭಕ್ಷ್ಯಗಳಲ್ಲಿ ಬಳಸುವ ಪ್ರಮುಖ ಆಹಾರ ಪದಾರ್ಥವಾಗಿದೆ. ಇದು Apiaceae ಸಸ್ಯ ಕುಟುಂಬಕ್ಕೆ ಸೇರಿದೆ. ಕೊತ್ತಂಬರಿ ಎಲೆ, ಕಾಂಡ ಮತ್ತು ಬೇರು ಎಲ್ಲವೂ ಔಷಧೀಯ. ಈ ಕೊತ್ತಂಬರಿ ಎಲೆಯು ಮೂತ್ರಪಿಂಡದ ವಿಷವನ್ನು ತೆಗೆದುಹಾಕುತ್ತದೆ ಮತ್ತು ಮೂತ್ರಪಿಂಡದ ಕಾಯಿಲೆಗಳನ್ನು ಗುಣಪಡಿಸುತ್ತದೆ.
ಕೊತ್ತಂಬರಿ ಸೊಪ್ಪಿನಲ್ಲಿ ಆಂಟಿಮೈಕ್ರೊಬಿಯಲ್, ಆಂಟಿ-ಎಪಿಲೆಪ್ಟಿಕ್, ಖಿನ್ನತೆ-ಶಮನಕಾರಿ, ಆಂಟಿಮ್ಯುಟಾಜೆನಿಕ್, ಉರಿಯೂತದ ಗುಣಲಕ್ಷಣಗಳಿವೆ. ಆದ್ದರಿಂದ ಈ ಗುಣಲಕ್ಷಣಗಳು ಮೂತ್ರಪಿಂಡದ ಕಾರ್ಯಕ್ಕೆ ಉಪಯುಕ್ತವಾಗಿವೆ.
ಕೊತ್ತಂಬರಿ ಸೊಪ್ಪು ನೆನೆಸಿಟ್ಟ ನೀರನ್ನು ಕುಡಿಯುವುದರಿಂದ ಆಗುವ ಇತರ ಪ್ರಯೋಜನಗಳು ಬಗ್ಗೆ ತಿಳಿದುಕೊಳ್ಳೋಣ
ಕೊತ್ತಂಬರಿ ಸೊಪ್ಪು ನೆನೆಸಿಟ್ಟ ನೀರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹೊಟ್ಟೆಯು ಸ್ವಚ್ಛವಾಗಿರುವುದರ ಜೊತೆಗೆ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ.
ಕೊತ್ತಂಬರಿ ಸೊಪ್ಪಿನಲ್ಲಿರುವ ಆಂಟಿಆಕ್ಸಿಡೆಂಟ್ʼಗಳು ಖಾಲಿ ಹೊಟ್ಟೆಯಲ್ಲಿ ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಕೊತ್ತಂಬರಿ ಎಲೆಯ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.
ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿರುವ ಕೊತ್ತಂಬರಿ ಸೊಪ್ಪಿನ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕೀಲು ಊತ ಮತ್ತು ಕೀಲು ನೋವು ನಿವಾರಣೆಯಾಗುತ್ತದೆ.
ನಿಯಮಿತವಾಗಿ ಕೊತ್ತಂಬರಿ ಸೊಪ್ಪು ನೆನೆಸಿಟ್ಟ ನೀರನ್ನು ಕುಡಿಯುವುದರಿಂದ ಕೂದಲಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ತಲೆಹೊಟ್ಟು, ಕೂದಲು ಉದುರಿವಿಕೆ, ಬಿಳಿ ಕೂದಲಿನ ಸಮಸ್ಯೆಗೆ ಇದು ಉಪಶಮನ ನೀಡುತ್ತದೆ.
ಮೇಲಿನ ಮಾಹಿತಿಯು ಮೂಲಭೂತ ಮಾಹಿತಿಗಾಗಿ ಮಾತ್ರ. ಆರೋಗ್ಯದ ವಿಷಯದಲ್ಲಿ ವೈದ್ಯರ ಸೂಚನೆಗಳನ್ನು ಪಾಲಿಸುವುದು ಉತ್ತಮ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ