ಮಳೆಗಾಲ ಇನ್ನೇನು ಪ್ರಾರಂಭವಾಗಲಿದೆ. ಕೆಲವೆಡೆ ಅದಾಗಲೇ ಮಳೆ ಬೀಳಲು ಶುರುವಾಗಿದೆ. ಈ ಸಂದರ್ಭದಲ್ಲಿ ಶೀತ, ಜ್ವರ, ತಲೆನೋವು ಸಮಸ್ಯೆಗಳು ಕಾಡುತ್ತವೆ,
ಇಂತಹ ಸಮಸ್ಯೆಗೆ ಇಂಗು ಬಳಸಿದರೆ ಶೀಘ್ರವೇ ಪರಿಹಾರ ಸಿಗಲಿದೆ. ಏಕೆಂದರೆ ಇದು ಔಷಧೀಯ ಗುಣಗಳ ನಿಧಿಯಾಗಿದೆ. .
ನೀವು ಮನೆಯಲ್ಲಿ ಇಂಗು ನೀರನ್ನು ತಯಾರಿಸಬಹುದು. ಲಘುವಾಗಿ ಬಿಸಿ ಮಾಡಿರುವ ನೀರಿಗೆ ಒಂದು ಚಿಟಿಕೆ ಇಂಗು ಬೆರೆಸಿ ನಂತರ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಸಾಮಾನ್ಯವಾಗಿ ತಲೆನೋವಿಗೆ ಇಂಗು ಸುಲಭ ಮನೆಮದ್ದು. ಉರಿಯೂತದ ಗುಣಲಕ್ಷಣಗಳು ಈ ಮಸಾಲೆಯಲ್ಲಿ ಕಂಡುಬರುತ್ತವೆ. ಜೊತೆಗೆ ಇದು ತಲೆಯ ರಕ್ತನಾಳಗಳಲ್ಲಿನ ಊತವನ್ನು ಕಡಿಮೆ ಮಾಡುತ್ತದೆ.
ಶೀತ, ಕೆಮ್ಮು ಮತ್ತು ನೆಗಡಿ ಇದ್ದರೆ, ಬಿಸಿನೀರು ಮತ್ತು ಇಂಗನ್ನು ಮಿಕ್ಸ್ ಮಾಡಿ ಸೇವಿಸುವ ಮೂಲಕ ಉಸಿರಾಟದ ತೊಂದರೆಗಳನ್ನು ದೂರವಿಡಬಹುದು.
ಇಂಗು ನೀರಿನ ಸಹಾಯದಿಂದ ತೂಕ ಕಡಿಮೆ ಮಾಡಬಹುದು. ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ತೂಕವನ್ನು ನಿಯಂತ್ರಿಸುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)