ನಿಮಗೆ ಮಧುಮೇಹ ಇದ್ದಾಗ, ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಸಾಂದ್ರತೆಯು ಅಧಿಕವಾಗಿರುತ್ತದೆ.
ಇದು ದೇಹದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಮಧುಮೇಹವನ್ನು ನಿಯಂತ್ರಿಸಲು ನಿಯಮಿತ ಔಷಧಿಗಳು ಅತ್ಯಗತ್ಯ.
ಆದರೆ, ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ, ನೀವು ದಿನನಿತ್ಯದ ಮಧುಮೇಹ ಔಷಧಿಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ.
ಪ್ರತಿದಿನ ಮಜ್ಜಿಗೆ ಸೇವಿಸುವುದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ ಎಂದು ಹೇಳಲಾಗುತ್ತದೆ..
ಇದಲ್ಲದೇ ಮಜ್ಜಿಗೆಗೆ ಚಿಯಾ ಬೀಜಗಳನ್ನು ಬೆರೆಸಿ ಕುಡಿದ್ರೆ ಇನ್ನೂ ಹೆಚ್ಚಿ ಲಾಭ ಸಿಗುತ್ತದೆ ಎಂದು ತಜ್ಞರು ಹೇಳುತ್ತಾರೆ..
ಚಿಯಾ ಬೀಜಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಇದು ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.