ಅನೇಕ ಜನರು ಬೆಳಗ್ಗೆ ಏಳುತ್ತಿದ್ದಂತೆ ಚಹಾ ಕುಡಿಯುತ್ತಾರೆ. ಗ್ರೀನ್ ಟೀ, ಬ್ಲಾಕ್ ಟೀ, ಹಾಲಿನ ಟೀ ಹೀಗೆ ತರಹೇವಾರಿ ಟೀಗಳನ್ನು ಕಾಣಬಹುದು. ಆದರೆ ಇದಕ್ಕೆ ಸಕ್ಕರೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಸಕ್ಕರೆ ಬದಲು ಬೆಲ್ಲವನ್ನು ಬಳಸಿ ಟೀ ಮಾಡಿ ಕುಡಿದರೆ ದೇಹಕ್ಕೆ ಅನೇಕ ಪ್ರಯೋಜನಗಳಿವೆ ಎಂದು ಅನೇಕ ಸಂಶೋಧನೆಗಳು ಹೇಳಿವೆ.
ಬೆಳಿಗ್ಗೆ ಬೆಲ್ಲದ ಚಹಾ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಬೆಲ್ಲವು ಮಲಬದ್ಧತೆ, ಅಸಿಡಿಟಿ ಮತ್ತು ಅಜೀರ್ಣ ಸಮಸ್ಯೆಗಳನ್ನು ನಿವಾರಿಸುತ್ತದೆ.
ಸಾಮಾನ್ಯವಾಗಿ ಜನರು ತೂಕ ಇಳಿಸಿಕೊಳ್ಳಲು ಅನೇಕ ರೀತಿಯ ವಸ್ತುಗಳನ್ನು ಬಳಸುತ್ತಾರೆ. ಆದರೆ ಬೆಲ್ಲದ ಚಹಾವನ್ನು ಕುಡಿಯುವುದರಿಂದ ತೂಕ ನಷ್ಟಕ್ಕೆ ಸಹಾಯಕವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಲೆನೋವು ಮತ್ತು ಮೈಗ್ರೇನ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಂತಹವರು ಪ್ರತಿದಿನ ಬೆಲ್ಲದ ಟೀ ಸೇವಿಸಬೇಕು. ಏಕೆಂದರೆ ಮೈಗ್ರೇನ್ ವಿರುದ್ಧ ಹೋರಾಡಲು ಸಹಾಯಕವಾಗಿರುವ ಅಂಶಗಳು ಬೆಲ್ಲದಲ್ಲಿವೆ.
ದೇಹದಲ್ಲಿ ರಕ್ತಹೀನತೆ ಇರುವವರು ಬೆಲ್ಲದ ಚಹಾವನ್ನು ಸೇವಿಸಬೇಕು. ಬೆಲ್ಲದ ಚಹಾದಲ್ಲಿ ಕಬ್ಬಿಣದ ಅಂಶವು ಸಮೃದ್ಧವಾಗಿದೆ. ಇದರಿಂದಾಗಿ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗುತ್ತದೆ ಮತ್ತು ರಕ್ತಹೀನತೆ ದೂರವಾಗುತ್ತದೆ.
ಬೆಲ್ಲದ ಚಹಾವನ್ನು ಸೇವಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ. ಬೆಲ್ಲದಲ್ಲಿ ಪೋಷಕಾಂಶಗಳಿದ್ದು ಇದು ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.