ಇಂದು ಸಾಕಷ್ಟು ಜನರು ಸೊಂಟ ನೋವು, ಮಂಡಿ ನೋವು ಹಾಗೂ ನರಗಳ ದೌರ್ಬಲ್ಯದಿಂದ ಬಳಲುತ್ತಿರುತ್ತಾರೆ. ಕಬ್ಬಿಣದ ಕೊರತೆಯಿಂದ ಈ ರೀತಿಯ ವ್ಯಾದಿಗಳು, ಅನಾರೋಗ್ಯ ಸಮಸ್ಯೆ ಮತ್ತು ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸುಲಭ ಮನೆಮದ್ದು ಇಲ್ಲಿದೆ ನೋಡಿ.
ಒಣ ಖರ್ಜುರ ಅಥವಾ ಉತ್ತತ್ತಿ ಸೇವಿಸುವುದರಿಂದ ಸಾಕಷ್ಟು ತೊಂದರೆ ನೀಡುವ ಸೊಂಟನೋವು, ಮಂಡಿನೋವು ಮತ್ತು ಕೀಲುನೋವುಗಳು ಕಡಿಮೆಯಾಗುತ್ತವೆ.
ಉತ್ತತ್ತಿ ಸೇವಿಸುವುದರಿಂದ ಪುರುಷರ ಲೈಂಗಿಕ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ. ಹೀಗಾಗಿ ಪ್ರತಿದಿನವೂ ಉತ್ತತ್ತಿ ಸೇವಿಸುವುದನ್ನು ರೂಢಿಸಿಕೊಳ್ಳಬೇಕು.
ಖರ್ಜುರ ಒಣಗಿದ ಮೇಲೆ ಉತ್ತತ್ತಿ ಆಗುತ್ತದೆ. ಇದರಲ್ಲಿರುವ ನೀರನ್ನು ಆ ಹಣ್ಣು ಹಿರಿಕೊಳ್ಳುವುದರಿಂದ ಅದು ಇನ್ನಷ್ಟು ರುಚಿಯಾಗುತ್ತದೆ.
ಪ್ರತಿದಿನವೂ 2 ಉತ್ತತ್ತಿ ತಿನ್ನುವುದರಿಂದ ಮಂಡಿ ನೋವು, ಸೊಂಟ ನೋವು ಹಾಗೂ ಇನ್ನಿತರ ಕೀಲು ನೋವಿನಿಂದ ನಿಮಗೆ ಮುಕ್ತಿ ದೊರೆಯುತ್ತದೆ.
2 ಉತ್ತತ್ತಿ ರಾತ್ರಿ ನೀರಿನಲ್ಲಿ ನೆನಸಿಟ್ಟು ಬೆಳಗ್ಗೆ ಎದ್ದ ತಕ್ಷಣ ಸೇವಿಸಬೇಕು. ಇದರಿಂದ ಅತ್ತ್ಯದ್ಭುತ ಆರೋಗ್ಯ ಪ್ರಯೋಜನ ಸಿಗುತ್ತವೆ. ಇದರಲ್ಲಿರುವ ಪೋಷಕಾಂಶ ನಿಮ್ಮ ದೇಹಕ್ಕೆ ಶಕ್ತಿ ನೀಡುವುದಲ್ಲದೆ ಅನೇಕ ತೊಂದರೆಗಳಿಂದ ಉಪಶಮನ ನೀಡುತ್ತದೆ.
ಉತ್ತತ್ತಿಯಲ್ಲಿ ವಿಟಮಿನ್ A, ವಿಟಮಿನ್ C ಕಬ್ಬಿಣಾಂಶ ಶರೀರಕ್ಕೆ ಸಮೃದ್ಧವಾದಂತಹ ಶಕ್ತಿ ನೀಡುತ್ತದೆ. ಇದು ಮೂಳೆಗಳಿಗೆ ಬಲವರ್ಧಕ. ಪ್ರತಿದಿನವೂ 2 ಉತ್ತತ್ತಿ ತಿನ್ನುವುದರಿಂದ ಸಾಕಷ್ಟು ನೋವುಗಳಿಂದ ನಾವು ನಿವಾರಣೆ ಪಡೆಯಬಹುದು.
ಉತ್ತತ್ತಿಯಿಂದ ದಂತಗಳು ಧೃಢವಾಗಿ ಸಮಸ್ಯೆಗಳು ಬರದಂತೆ ನಿವಾರಣೆ ಮಾಡುತ್ತದೆ. ಹೀಗೆ ಪ್ರತಿನಿತ್ಯವೂ ಉತ್ತತ್ತಿ ತಿನ್ನುವುದರಿಂದ ಉತ್ತಮ ಆರೋಗ್ಯ ಲಾಭಗಳಿವೆ.