ಕಿಡ್ನಿ ಕೆಲಸ ಮಾಡುವುದು ನಿಲ್ಲಿಸುತ್ತಿದೆ ಎನ್ನುವುದನ್ನು ಸೂಚಿಸುತ್ತದೆ ಈ ಲಕ್ಷಣ

Ranjitha R K
Jun 16,2025

ಮೂತ್ರ ಪಿಂಡದ ಆರೋಗ್ಯ

ಕಿಡ್ನಿ ನಮ್ಮ ದೇಹದ ಅತಿ ಪ್ರಮುಖ ಭಾಗ. ಇದರ ಆರೋಗ್ಯ ಕಾಪಾಡಿಕೊಳ್ಳುವುದು ಕೂಡಾ ಅತಿ ಮುಖ್ಯ. ಹೊಸ ತಲೆಮಾರಿನ ಜೀವನ ಶೈಲಿ ನಮ್ಮ ಮೂತ್ರ ಪಿಂಡದ ಆರೋಗ್ಯದ ಮೇಲೂ ಅನೇಕ ಪರಿಣಾಮ ಬೀರುತ್ತಿದೆ.

ಐದು ಬದಲಾವಣೆಗಳು

ನಿಮ್ಮ ಆರೋಗ್ಯದಲ್ಲಿ ಈ ಕೆಳಗಿನ ಐದು ಬದಲಾವಣೆಗಳು ಕಂಡು ಬಂದರೆ, ನಿಮ್ಮ ಕಿಡ್ನಿ ಆರೋಗ್ಯ ಹಾಳಾಗಿದೆಯೆಂದೇ ಅರ್ಥ. ಆಗ ಕೂಡಲೇ ನೀವು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ನಿರಂತರ ಆಯಾಸ:

ಸಾಕಷ್ಟು ವಿರಾಮದ ಬಳಿಕವೂ ನಿರಂತರ ಆಯಾಸ, ವೀಕ್ನೆಸ್‌ ಕಂಡು ಬಂದರೆ, ನಿಮ್ಮ ಕಿಡ್ನಿ ಸರಿಯಾಗಿ ಕೆಲಸ ಮಾಡದೇ ಇರುವುದು ಕೂಡಾ ಒಂದು ಕಾರಣ ಆಗಿರಬಹುದು.

ಮಣಿಗಂಟು, ಪಾದ, ಕೈಯಲ್ಲಿ ಬಾವು:

ಕೈ, ಪಾದ, ಕಾಲು ಹಾಗೂ ಕೆಲವೊಮ್ಮೆ ಮುಖ ಊದಿಕೊಂಡಿದ್ದರೆ, ಅದನ್ನು ಕಡೆಗಣಿಸುವುದು ಸರಿಯಲ್ಲ. ಅದೂ ಕೂಡಾ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯ ಮುನ್ನೆಚ್ಚರಿಕೆ ನೀಡುತ್ತಿರಬಹುದು. ಪಾದ, ಕಾಲು, ಮಣಿಗಂಟು ಊದಿ ಕೊಳ್ಳುತ್ತಿದ್ದರೆ, ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದೇ ಹೇಳಬಹುದು.

ಮೂತ್ರವಿಸರ್ಜನೆಯಲ್ಲಿ ಉರಿ, ವ್ಯತ್ಯಾಸ:

ನಮ್ಮ ಮೂತ್ರ ಕೂಡಾ ನಮ್ಮ ಆರೋಗ್ಯದ ಸುಳಿವು ನೀಡುತ್ತದೆ. ಮೂತ್ರದ ಬಣ್ಣದಲ್ಲಿ ವ್ಯತ್ಯಾಸ, ಮೂತ್ರದಲ್ಲಿ ವಿಪರೀತ ನೊರೆ, ಸರಾಗವಾಗಿ ಮೂತ್ರ ವಿಸರ್ಜನೆ ಆಗದಿರುವುದು, ಮೂತ್ರ ವಿಸರ್ಜನೆ ವೇಳೆ ಉರಿ, ಸರಿಯಾಗಿ ಮೂತ್ರ ವಿರ್ಸಜನೆ ಆಗದಿರುವುದು - ಈ ಎಲ್ಲಾ ಸಮಸ್ಯೆಗಳು ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸದೇ ಹೋದಾಗ ಉದ್ಭವವಾಗುತ್ತವೆ.

ಉಸಿರುಕಟ್ಟಿದಂತಾಗುವುದು:

ನಿಮಗೆ ಪದೇ ಪದೇ ಉಸಿರುಗಟ್ಟಿದಂತಾದರೆ ಯಾವುದೇ ಕಾರಣಕ್ಕೂ ಅದನ್ನು ಕಡೆಗಣಿಸಬೇಡಿ. ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸದೇ ಹೋದಾಗ, ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಕಿಡ್ನಿ ದ್ರವವನ್ನು ಸರಿಯಾಗಿ ಫಿಲ್ಟರ್‌ ಮಾಡಲು ವಿಫಲವಾದಾಗ, ಶ್ವಾಸಕೋಸದಲ್ಲಿ ದ್ರವ ಶೇಖರಣೆಯಾಗುವ ಸಾಧ್ಯತೆಗಳಿವೆ. ಇಲ್ಲಿ ದ್ರವ ಶೇಖರಣೆಯಾದಾಗ, ಉಸಿರಾಟಕ್ಕೆ ಸಮಸ್ಯೆ ಉಂಟಾಗುತ್ತದೆ.

ಒಣ ಚರ್ಮ ಮತ್ತು ಚರ್ಮದಲ್ಲಿ ತುರಿಕೆ:

ಕಿಡ್ನಿ ನಿಮ್ಮ ದೇಹದಲ್ಲಿರುವ ವೇಸ್ಟ್‌ ಮತ್ತು ಹೆಚ್ಚುವರಿ ದ್ರವವನ್ನು ಫಿಲ್ಟರ್‌ ಮಾಡುತ್ತದೆ. ಇದರಿಂದ ನಮ್ಮ ರಕ್ತ ಶುದ್ಧವಾಗುತ್ತದೆ ಮತ್ತು ಮೂಳೆ ಬಲಿಷ್ಠವಾಗುತ್ತದೆ. ವೇಸ್ಟ್‌ ಮತ್ತು ಹೆಚ್ಚುವರಿ ದ್ರವ ಫಿಲ್ಟ್‌ ಆಗದೇ ಹೋದಾಗ, ಚರ್ಮ ಒಣಗಲು ಶುರುವಾಗುತ್ತದೆ.


ಸೂಚನೆ : ಈ ಮೇಲಿನ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.

VIEW ALL

Read Next Story