ಮಧುಮೇಹ ದೀರ್ಘಾವಧಿಯ ಕಾಯಿಲೆಯಾಗಿದ್ದು ಇದನ್ನು ನಿಯಂತ್ರಿಸಬಹುದೇ ಹೊರತು ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ.
ತಜ್ಞರ ಪ್ರಕಾರ, ಮಧುಮೇಹ ಆರಂಭಕ್ಕೂ ಮೊದಲು ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇವನ್ನು ಗುರುತಿಸಿ ಆರಂಭದಲ್ಲೇ ಚಿಕಿತ್ಸೆ ಪಡೆಯುವುದರಿಂದ 'ಮಧುಮೇಹ'ಕ್ಕೆ ತುತ್ತಾಗುವುದನ್ನು ತಪ್ಪಿಸಬಹುದು.
ಸರಿಯಾದ ಸಮಯಕ್ಕೆ ಆಹಾರ ಸೇವಿಸಿದರೂ ಕೂಡ ಅತಿಯಾದ ದಣಿದ ಭಾವನೆ ಕಾಡುತ್ತಿದ್ದರೆ ಇದು ದೇಹದಲ್ಲಿ ಶುಗರ್ ಹೆಚ್ಚಾಗಿದೆ ಎಂದರ್ಥ. ದೀರ್ಘಕಾಲದವರೆಗೆ ಈ ಸಮಸ್ಯೆ ನಿಮ್ಮನ್ನು ಬಾಧಿಸುತ್ತಿದ್ದರೆ ತಪ್ಪದೇ ವೈದ್ಯರನ್ನು ಸಂಪರ್ಕಿಸಿ.
ಶುಗರ್ ಹೆಚ್ಚಳವು ಇನ್ಸುಲಿನ್ ದಕ್ಷತೆಯ ಮೇಲೆ ನೇರ ಪರಿಣಾಮವನ್ನು ಉಂಟು ಮಾಡುತ್ತದೆ. ಇದರಿಂದ ಇದ್ದಕ್ಕಿದ್ದಂತೆ ತೂಕ ಅತಿಯಾಗಿ ಕಡಿಮೆಯಾಗುತ್ತದೆ. ಹಾಗಾಗಿ, ದಿಢೀರ್ ತೂಕ ಇಳಿಕೆಯನ್ನು ಮಧುಮೇಹ ಪೂರ್ವ ಲಕ್ಷಣವೆಂದು ಹೇಳಲಾಗುತ್ತದೆ.
ಬ್ಲಡ್ ಶುಗರ್ ಹೆಚ್ಚಾಗಿದ್ದರೆ ದೇಹದಲ್ಲಿ ವೇಗವಾಗಿ ನೀರಿನ ನಷ್ಟವಾಗುತ್ತದೆ. ಇದು ಅತಿಯಾದ ಬಾಯಾರಿಕೆ ಭಾವನೆಯನ್ನು ಮೂಡಿಸುತ್ತದೆ.
ರಕ್ತದಲ್ಲಿ ಸಕ್ಕರ ಮಟ್ಟ ಏರುಪೇರಾದಾಗ ದೇಹದಿಂದ ಹೆಚ್ಚುವರಿ ಸಕ್ಕರೆಯನ್ನು ತೆಗೆದುಹಾಕಲು ಹೆಚ್ಚು ಮೂತ್ರ ಉತ್ಪಾದನೆಯಾಗುತ್ತದೆ. ಇದರಿಂದಾಗಿ ಪದೇ ಪದೇ ಮೂತ್ರ ವಿಸರ್ಜನೆ ಸಮಸ್ಯೆ ಉಂಟಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.