ಬಿಕ್ಕಳಿಕೆ ಸಮಸ್ಯೆಗೆ ಸುಲಭ ಪರಿಹಾರಕ್ಕಾಗಿ ಹೀಗೆ ಮಾಡಿ
ಗಂಟಲಿನಲ್ಲಿ ಏನಾದರೂ ಸಿಲುಕಿಕೊಂಡಾಗ ಅಥವಾ ಉಸಿರಾಟದ ಪ್ರದೇಶವು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಾಗ ಬಿಕ್ಕಳಿಕೆ ಸಂಭವಿಸುತ್ತದೆ.
ಬಿಕ್ಕಳಿಕೆ ಸಮಸ್ಯೆಗೆ ಕೆಲವು ಸರಳ ಸಲಹೆ ಅನುಸರಿಸಿದರೆ ತ್ವರಿತವಾಗಿ ಪರಿಹಾರ ಪಡೆಯಬಹುದು. ಅವುಗಳೆಂದರೆ...
ನಿಮಗೆ ಕುಡಿಯಲು ಸಾಧ್ಯವಾಗುವಷ್ಟು ನೀರನ್ನು ಬಿಸಿ ಮಾಡಿ ಅದನ್ನು ಕುಡಿಯಿರಿ. ಬಿಕ್ಕಳಿಕೆಗೆ ತಕ್ಷಣವೇ ಪರಿಹಾರ ದೊರೆಯುತ್ತದೆ.
ಮೂಲಂಗಿ ಎಲೆ ಸೇವನೆಯಿಂದ ಬಿಕ್ಕಳಿಕೆ ತಕ್ಷಣವೇ ನಿಲ್ಲುತ್ತದೆ.
ಶುಂಠಿ ರಸ, ಕರಿಮೆಣಸು, ನಿಂಬೆ ರಸವನ್ನು ಬೆರೆಸಿ ನೆಕ್ಕುವುದರಿಂದ ಬಿಕ್ಕಳಿಕೆ ಕೂಡಲೇ ನಿಲ್ಲುತ್ತದೆ.
ನೀರಿನಲ್ಲಿ ಒಣ ಶುಂಠಿಯನ್ನು ಹಾಕಿ ಅದರ ವಾಸನೆ ತೆಗೆದುಕೊಳ್ಳಿ. ಕೂಡಲೇ ಬಿಕ್ಕಳಿಕೆಯಿಂದ ಪರಿಹಾರ ದೊರೆಯುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.