ನೀವು ಉಪ್ಪಿನಕಾಯಿ, ಚಟ್ನಿ, ಜ್ಯೂಸ್ ರೂಪದಲ್ಲಿ ನೆಲ್ಲಿಕಾಯಿಯನ್ನು ಸೇವಿಸಬಹುದು.
ಒಣನೆಲ್ಲಿ ತಿನ್ನುವುದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಒಣಗಿದ ನೆಲ್ಲಿಕಾಯಿಯಲ್ಲಿ ಪೋಷಕಾಂಶಗಳು ಹಾಗೇ ಇರುತ್ತವೆ.
ಒಣ ನೆಲ್ಲಿ ತಯಾರಿಸಲು ನೀವು ಮೊದಲು ನೆಲ್ಲಿಕಾಯಿ ಬೀಜಗಳನ್ನು ತೆಗೆದಿಡಬೇಕು. ಬಳಿಕ ಅದಕ್ಕೆ ಉಪ್ಪು ಸೇರಿಸಿ ಶುಭ್ರವಾದ ಬಟ್ಟೆಯಲ್ಲಿ ಕಟ್ಟಿ ಬಿಸಿಲಿನಲ್ಲಿ ಇಡಬೇಕು. ನೆಲ್ಲಿಕಾಯಿ ಒಣಗಿದ ಬಳಿಕ ಅದನ್ನು ಶುದ್ಧ ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಿ.
ಒಣ ನೆಲ್ಲಿಕಾಯಿ ತಿಂದರೆ ನಿಮ್ಮ ದೃಷ್ಟಿ ಸೂಕ್ಷ್ಮವಾಗುತ್ತದೆ. ಅಷ್ಟೇ ಅಲ್ಲದೆ ನೆಲ್ಲಿಕಾಯಿಯಲ್ಲಿ ವಿಟಮಿನ್-ಎ ಮತ್ತು ವಿಟಮಿನ್-ಸಿ ಇದ್ದು, ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ.
ವಿಟಮಿನ್-ಎ, ವಿಟಮಿನ್-ಸಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ನೆಲ್ಲಿಕಾಯಿಯಲ್ಲಿ ಕಂಡುಬರುತ್ತವೆ. ಚಳಿಗಾಲದಲ್ಲಿ ವೈರಲ್ ಸೋಂಕನ್ನು ತಪ್ಪಿಸಲು ನೀವು ಒಣ ನೆಲ್ಲಿಕಾಯಿಯನ್ನು ಸೇವಿಸಬೇಕು.
ಬಾಯಿಯಲ್ಲಿನ ಸೋಂಕನ್ನು ತೊಡೆದುಹಾಕಲು ಒಣ ನೆಲ್ಲಿಯನ್ನು ಸೇವಿಸಬೇಕು. ಇವುಗಳು ಬಾಯಿಯ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ಜೊತೆಗೆ ಬಾಯಿಯ ದುರ್ವಾಸನೆ ಹೋಗಲಾಡಿಸಲು ಸಹಕಾರಿಯಾಗಿದೆ.
ಒಣ ನೆಲ್ಲಿಕಾಯಿ ಹೊಟ್ಟೆನೋವಿಗೆ ಬಹಳ ಪರಿಣಾಮಕಾರಿಯಾಗಿದೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಇದರಲ್ಲಿ ಕಂಡುಬರುತ್ತವೆ.